Belagavi NewsBelgaum NewsLatest

*ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಹಿರಿಯ ಜೀವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕ ಹಂದಿಗುಂದ ಗ್ರಾಮದ ಸಂಗಪ್ಪ ಚನ್ನಬಸಪ್ಪ ಚಿಲ್ಹಾಳಶೆಟ್ಟಿ (83) ನಿಧನರಾಗಿದ್ದಾರೆ. ಮೃತರ ಅಂತಿಮ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಬೈಲಹೊಂಗಲ  ಮುಖಾಂತರ ದೇಹವನ್ನು ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಿ ಸಾವಿನಲ್ಲಿ  ಸಾರ್ಥಕತೆ ಮೆರೆದಿದ್ದಾರೆ.

ಮೃತರ ಅಂತಿಮ ದರ್ಶನವನ್ನು ಹಂದಿಗುಂದದ ಸ್ವಗೃಹದಲ್ಲಿ ಏರ್ಪಡಿಸಲಾಗಿದೆ. ನಂತರ ಡಾ.ರಾಮಣ್ಣವರ ಟ್ರಸ್ಟಿಗೆ ದೇಹವನ್ನು ಹಸ್ತಾಂತರ ಮಾಡಲಾಗುವುದು. ಚಿಲ್ಹಾಳಶೆಟ್ಟಿ ಕುಟುಂಬದವರಿಗೆ ಹಾಗೂ ದೇಹದಾನದ ಪ್ರಕ್ರಿಯೆ ನೆರವೇರಿಸಿ ಕೊಟ್ಟಿದ್ದಕ್ಕೆ ಹಂದಿಗುಂದ ಗ್ರಾಮದ ಸಮಸ್ತ ನಾಗರಿಕರಿಗೆ  ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಚಿಲ್ಹಾಳಶೆಟ್ಟಿ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಓರ್ವ ಪುತ್ರ ಮಲ್ಲಪ್ಪ ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.

Related Articles

Back to top button