LatestUncategorized

*ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಹೆಡ್ ಕಾನ್ಸ್ ಟೇಬಲ್ ಓರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ನಗರದ ಡಿಎ ಆರ್ ಹೆಡ್ ಕ್ವಾರ್ಟರ್ಸ್ ನಲ್ಲಿ ನಡೆದಿದೆ.

47 ವರ್ಷದ ಪಾಂಡುರಂಗ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ ಟೇಬಲ್. ಪಾಂಡುರಂಗ ಕಲಬುರ್ಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಕೆಲಸ ನಿರ್ವಹಿಸಿ ಮನೆಗೆ ವಾಪಸ್ ಆದವರು ಹೆಂಡತಿ ಮಕ್ಕಳೊಂದಿಗೆ ಚೆನ್ನಗಿಯೆ ಮಾತನಾಡಿದ್ದರು. ರತರಿ ಅತಿಯಾದ ಸೆಕೆ ಕಾರಣಕ್ಕೆ ಮಕ್ಕಳಿಬ್ಬರು ಮನೆ ಮೇಲ್ಛಾವಣಿಯಲ್ಲಿ ಮಲಗಿದ್ದರು. ಪಾಂಡುರಂಗ ಪತ್ನಿಯೊಂದಿಗೆ ಮನೆಯ ಕೋಣೆಯಲ್ಲಿ ಮಲಗಿದ್ದರು. ಆದರೆ ಇಂದು ಬೆಳಿಗೆಯಷ್ಟರಲ್ಲಿ ಅಡುಗೆ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.

ಆತ್ಮಹಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://pragati.taskdun.com/boydeathcrocodile-attackraichur/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button