ಪ್ರಗತಿ ವಾಹಿನಿ ಸುದ್ದಿ ಚಿಕ್ಕಬಳ್ಳಾಪುರ –
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಆರೋಗ್ಯ ಇಲಾಖೆಯಲ್ಲಿ ಶೇ.೬೦ರಷ್ಟು ಕಾಮಗಾರಿಯನ್ನು ಸಚಿವ ಸುಧಾಕರ್ ಕುಟುಂಬದವರೇ ಪಡೆಯುತ್ತಾರೆ ಎಂದಿರುವುದು ಆಧಾರರಹಿತ ಹೇಳಿಕೆ. ಕೆಂಪಣ್ಣ ವಿರುದ್ಧ ಮಾನನಷ್ಟ ಮೋಕದ್ದಮೆ ದಾಖಲಿಸಲಾಗುವುದು ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಆರೋಪ ಮಾಡಬೇಕಿದ್ದರೂ ಅದಕ್ಕೆ ಸಾಕ್ಷ್ಯಾಧಾರಗಳು ಬೇಕು, ಕೆಂಪಣ್ಣ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಬೇಜವಾಬ್ದಾರಿಯಿಂದ ಮಾತನಾಡುವುದು ಸರಿಯಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಹೇಳಿದರು.
ಕೆಂಪಣ್ಣ ಮಾಡಿದ್ದ ಆರೋಪವೇನು ?
ಸಚಿವ ಸುಧಾಕರ್ ಅವರ ಕುಟುಂಬದವರೇ ಶೇ.೬೦ರಷ್ಟು ಕಾಮಗಾರಿಗಳ ಗುತ್ತಿಗೆ ಪಡೆಯುತ್ತಿದ್ದಾರೆ, ಅವರ ಪತ್ನಿಯ ಹೆಸರಿನಲ್ಲೂ ಕಾಮಗಾರಿಯ ಬಿಲ್‌ಗೆ ಚೆಕ್ ನೀಡಲಾಗಿದೆ ಎಂದು ಕೆಂಪಣ್ಣ ಬೆಂಗಳೂರಿನಲ್ಲಿ ಆರೋಪ ಮಾಡಿದ್ದಾರೆ.
ತನ್ನನ್ನು ಔಟ್ ಮಾಡಿದ ಯುವ ಬೌಲರ್ ಹೆಗಲ ಮೇಲೆ ಕೈ ಹಾಕಿ ಅಭಿನಂದಿಸಿದ ವಿರಾಟ್ ಕೋಹ್ಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ