Latest

ತನ್ನನ್ನು ಔಟ್ ಮಾಡಿದ ಯುವ ಬೌಲರ್ ಹೆಗಲ ಮೇಲೆ ಕೈ ಹಾಕಿ ಅಭಿನಂದಿಸಿದ ವಿರಾಟ್ ಕೋಹ್ಲಿ

 

ಪ್ರಗತಿ ವಾಹಿನಿ ಸುದ್ದಿ ಮುಂಬೈ –

Home add -Advt

ಚನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿಯ ವಿರಾಟ್ ಕೋಹ್ಲಿ ಅವರನ್ನು ಕೇವಲ ಒಂದು ರನ್‌ಗೆ ಔಟ್ ಮಾಡಿದ ಸಿಎಸ್‌ಕೆಯ ಯುವ ಬೌಲರ್ ಮುಕೇಶ್ ಚೌದರಿ ಅವರನ್ನು ಪಂದ್ಯದ ಬಳಿಕ ಕೋಹ್ಲಿ ಅಭಿನಂದಿಸಿದ್ದಾರೆ.

ವಿರಾಟ್ ಕೋಹ್ಲಿ ಅವರು ಪಂದ್ಯದ ಬಳಿಕ ಮುಕೇಶ್ ಚೌದರಿ ಹೆಗಲ ಮೇಲೆ ಕೈ ಹಾಕಿ ಅಭಿನಂದಿಸಿದ ಫೋಟೊ ಒಂದನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದೆ.

ಪಂದ್ಯದಲ್ಲಿ ಸಿಎಸ್‌ಕೆ ೨೦ ಓವರ್‌ಗಳಲ್ಲಿ ೨೧೭ ರನ್ ಬಾರಿಸಿತ್ತು. ಈ ಮೊದಲಿನ ಸತತ ನಾಲ್ಕು ಪಂದ್ಯಗಳಲ್ಲಿ ಸೋಲುಂಡಿದ್ದ ಸಿಎಸ್‌ಕೆಗೆ ಆರ್‌ಸಿಬಿ ವಿರುದ್ಧದ ಪಂದ್ಯ ಮಹತ್ವದ್ದಾಗಿತ್ತು. ಮುಕೇಶ್ ಚೌದರಿ ಕೋಹ್ಲಿ ವಿಕೇಟ್ ಕೆಡಹುವ ಮೂಲಕ ಸಿಎಸ್ಕೆ ಜಯಕ್ಕೆ ಮುನ್ನುಡಿ ಬರೆದರು. ಪಂದ್ಯದಲ್ಲಿ ಸಿಎಸ್‌ಕೆ ಆರ್‌ಸಿಬಿ ವಿರುದ್ಧ ೨೩ ರನ್‌ಗಳ ಜಯ ಸಾಧಿಸಿತು.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಾಬಿನ್ ಉತ್ತಪ್ಪ

Related Articles

Back to top button