
ಪ್ರಗತಿವಾಹಿನಿ ಸುದ್ದಿ: ಬೀದರ್ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆ ಭಾರಿ ಅವಾಂತರ ಸೃಷ್ಟಿಸಿದ್ದು, ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಹಾಗೂ ಎರಡು ಎತ್ತುಗಳು ಸಾವನಪ್ಪಿವೆ.
ಹುಮನಾಬಾದ್ ತಾಲೂಕಿನ ಧುಮ್ಮನಸೂರ ಹೊರ ವಲಯದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಚಿಟಗುಪ್ಪ ತಾಲ್ಲೂಕು ಬೆಳಕೇರಾ ಗ್ರಾಮದ ನಿವಾಸಿ ಚಂದ್ರಕಾಂತ ಬಸವರಾಜ (25) ಸಾವನ್ನಪ್ಪಿದ್ದಾರೆ. ಸಂಜೆ ಗುಡುಗು ಸಮೇತ ಮಳೆ ಸುರಿಯುತಿದ್ದಾಗ ಈ ಅವಘಡ ಸಂಭವಿಸಿದ್ದು, ತಹಶೀಲ್ದಾರ್ ಅಂಜುಮ್ ತಬಸುಮ್, ಪಿಎಸ್ಐ ಬಸವರಾಜ, ಕಂದಾಯ ನಿರೀಕ್ಷಕ ರಾಹುಲ್, ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜಮೀನಿಗೆ ತೆರಳಿದ್ದ ವೇಳೆ ಸಿಡಿಲು ಬಡಿದು ಯುವಕ ಸಾವು
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು (ಬಿ) ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ವೇಳೆ ಸಿಡಿಲು ಬಡಿದು ಸುನೀಲ್ ವಿಜಯಕುಮಾರ್ ಮದುರೈ (32) ಸಾವನ್ನಪ್ಪಿದ್ದಾರೆ. ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಎರಡು ಎತ್ತುಗಳು ಸಾವು
ಔರಾದ್ ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಸಿಡಿಲು ಬಡಿದು ಸಾಗರ ಬಸವರಾಜ ಪಾಟೀಲ ಅವರ ಎರಡು ಎತ್ತುಗಳು ಸ್ಥಳದಲ್ಲಿ ಸಾವನಪ್ಪಿದ್ದು, ರೈತ ಕಂಗಾಲಾಗಿದ್ದಾನೆ.ಇನ್ನು ಘಟನೆ ನಡೆಸ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ