ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ –
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಶನಿವಾರ ಸಂಜೆ ಭಾರಿ ಮಳೆ ಸುರಿದಿದೆ.
ಬೆಳಗಾವಿ ನಗರದಲ್ಲಿ ಸಂಜೆ ೮ ಗಂಟೆಯ ವೇಳೆಗೆ ತುಂತುರು ಮಳೆ ಸುರಿಯಿತು. ಅಲ್ಲದೇ ತಂಪಾದ ಗಾಳಿ ಬೀಸಿದೆ. ನಗರದಲ್ಲಿ ಅಂಗಡಿಗಳಿಗೆ ತೆರಳಿದವರು, ಉದ್ಯೋಗಸ್ತರು, ವ್ಯಾಪಾರಿಗಳು ಏಕಾಏಕಿ ಸುರಿದ ಮಳೆಯಿಂದ ತೊಂದರೆ ಅನುಭವಿಸಿದರು. ದ್ವಿಚಕ್ರ ವಾಹನ ಸಂಚಾರಿಗಳು, ಪಾದಚಾರಿಗಳು ಸಮೀಪದ ಬಸ್ ಶೆಲ್ಟರ್‌ಗಳು ಕಟ್ಟಡಗಳ ಮುಂಭಾಗದಲ್ಲಿ ಆಶ್ರಯ ಪಡೆದ ದೃಷ್ಯ ಕಂಡುಬಂದಿತು.
ಅಲ್ಲದೇ ಜಿಲ್ಲೆಯ ಯಮಕನಮರಡಿ, ನಿಪ್ಪಾಣಿ, ಕಾಗವಾಡ, ಸವದತ್ತಿ, ಗೋಕಾಕ್ ಸೇರಿದಂತೆ ವಿವಿಧೆಡೆ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದೆ.
ಮಾರ್ಚ್ ಮಧ್ಯದಲ್ಲಿ ಸುರಿದ ಮಳೆಯಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳಕ್ಕೆ ಸುಸ್ತಾಗಿದ್ದ ಜನರಿಗೆ ಮಳೆ ತಂಪೆರೆದಿದೆ.
ಶಿರಸಿಯಲ್ಲಿ ಗಾಳಿ, ಮಳೆಯ ಅಬ್ಬರ ; ಕಂಗೆಟ್ಟ ಜಾತ್ರೆ ಪೇಟೆ (ವಿಡೀಯೋ ಸಹಿತ ಸುದ್ದಿ)
https://pragati.taskdun.com/latest/heavy-rainkarnatakaandrapradeshtamilnadu/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ