ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರ ಬೆನ್ನಿಗೇ ಜನರ ರಕ್ಷಣೆಗೆ ಕೆಲ ಪ್ರದೇಶಗಳಲ್ಲಿ ದೋಣಿಗಳನ್ನು ಬಳಸಬೇಕಾಗಿ ಬಂದಿದೆ.
ರಸ್ತೆಗಳೆಲ್ಲ ಮುಳುಗಡೆಯಾಗಿ ಮನೆಗಳಿಗೆ ನೀರು ನುಗ್ಗಿ ಜನರ ಪರಿಸ್ಥಿತಿ ಅಯೋಮಯವಾಗಿದ್ದು ಮತ್ತೊಂದೆಡೆ ಹೋಗಬೇಕೆಂದರೂ ಹೊರಗೆ ಬರದಂಥ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪ್ರದೇಶಗಳಲ್ಲಿ ಗಾಳಿ ತುಂಬಿದ ದೋಣಿಗಳನ್ನು ಬಳಸಿ ಈ ಪ್ರದೇಶಗಳ ಜನರನ್ನು ಹೊರತರಬೇಕಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಅವ್ಯವಸ್ಥೆ ಉಂಟಾಗಿದ್ದು, ಟ್ವಿಟ್ಟರ್ ಬಳಕೆದಾರರು ವಿಮಾನ ನಿಲ್ದಾಣದ ವಿಡಿಯೊ ಹಂಚಿಕೊಂಡಿದ್ದಾರೆ “ಭಾರತದ ಇನ್ಫ್ರಾ ಸ್ಥಿತಿಯನ್ನು ನೋಡಿ ನನಗೆ ಅಳು ಬರುತ್ತಿದೆ” ಎಂದು ನೆಟ್ಟಿಗರೊಬ್ಬರು ಹೇಳಿಕೊಂಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; 35ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ