Kannada NewsLatest

ಗೋಕಾಕ: ನೀರಿನಲ್ಲಿ ಸಿಲುಕಿದ್ದ 12 ದಿನದ ಬಾಣಂತಿ, ಮಗು ರಕ್ಷಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಬೆಳಗಾವಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯ ಹಲವೆಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಮಳೆ ನೀರಿನಲ್ಲಿ ಸಿಲುಕಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದ ಬಾಣಂತಿ ಮಗುವನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಗೋಕಾಕ್ ನಲ್ಲಿ ನಡೆದಿದೆ.

ಭಾರಿ ಮಳೆಯಿಂದಾಗಿ ಗೋಕಾಕ್ ತಾಲೂಕಿನ ಮಾಣಿಕವಾಡಿಯಲ್ಲಿ ಮನೆಗೆ ಏಕಾಏಕಿ ನೀರಿ ನುಗ್ಗಿದೆ. ಮನೆ ಸಂಪೂರ್ಣ ಜಲಾವೃತಗೊಂಡಿದೆ. ಮನೆಯಲ್ಲಿದ್ದ 12 ದಿನದ ಬಾಣಂತಿ ರಕ್ಷಣೆಗಾಗಿ ಕೂಗಿದ್ದಾಳೆ. ಸ್ಥಳೀಯರು ಇದೀಗ ಹಗ್ಗದ ಸಹಾಯದಿಂದ ಬಾಣಂತಿ ಹಾಗೂ ಹಸುಗೂಸನ್ನು ರಕ್ಷಣೆ ಮಾಡಿದ್ದಾರೆ.

ಇನ್ನೊಂದೆಡೆ ಮಾಣಿಕವಾಡಿಯಲ್ಲಿ ಮಳೆಯಿಂದಾಗಿ ಮನೆ ಜಲಾವೃತಗೊಂಡಿದ್ದರಿಂದ ಮನೆಯಿಂದ ಹೊರ ಬರಲಾಗದೇ ಪ್ರಾಣ ರಕ್ಷಣೆಗಾಗಿ ಮನೆ ಮೇಲೆ ಹತ್ತಿ ಕುಳಿತಿದ್ದ ಕುಟುಂಬದವರನ್ನು ಕೂಡ ರಕ್ಷಿಸಲಾಗಿದೆ.
ರಾಜಧಾನಿಯ ಬೀದಿಗಿಳಿದ ದೋಣಿಗಳು; ಮಳೆ ಅವಾಂತರದ ಮಧ್ಯೆ ಜನರ ರಕ್ಷಣೆ ಕಾರ್ಯ

https://pragati.taskdun.com/latest/heavyrain-bengaluru-boats-deployed-rescue-residents-karnataka/

Related Articles

Back to top button