Latest

ಅರ್ಶ್‌ದೀಪ್ ಸಿಂಗ್ ಅವರನ್ನು ಸಮರ್ಥಿಸಿಕೊಂಡ ಪಾಕಿಸ್ತಾನದ ಮಾಜಿ ಆಲ್ ರೌಂಡರ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಕ್ಯಾಚ್ ಕೈಬಿಟ್ಟಿದ್ದಕ್ಕಾಗಿ ಟೀಂ ಇಂಡಿಯಾ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಿದ ನಂತರ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಅವರು ಅರ್ಶ್‌ದೀಪ್ ಸಿಂಗ್ ಅವರನ್ನು ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ.

“ಎಲ್ಲಾ ಭಾರತೀಯ ತಂಡದ ಅಭಿಮಾನಿಗಳಿಗೆ ನನ್ನ ವಿನಂತಿ. ಕ್ರೀಡೆಯಲ್ಲಿ ನಾವು ಮಾನವರಾಗಿರುವಂತೆ ತಪ್ಪುಗಳನ್ನು ಮಾಡುತ್ತೇವೆ. ದಯವಿಟ್ಟು ಈ ತಪ್ಪುಗಳಲ್ಲಿ ಯಾರನ್ನೂ ಅವಮಾನಿಸಬೇಡಿ” ಎಂದು ಅವರು ಬರೆದಿದ್ದಾರೆ.

Home add -Advt

ಭಾರತ- ಪಾಕ್ ಪರಸ್ಪರ ಸಾಂಪ್ರದಾಯಿಕ ಶತ್ರುಗಳೆಂದು ಬಿಂಬಿತವಾಗಿದ್ದರೂ ಕ್ರೀಡಾ ಮನೋಭಾವದಿಂದ ಮೊಹಮ್ಮದ್ ಹಫೀಜ್ ಮಾಡಿದ ಟ್ವೀಟ್ ಹಲವರ ಗಮನ ಸೆಳೆದಿದೆ.

ಅನೇಕ ನೆಟ್ಟಿಗರು ಮೊಹಮ್ಮದ್ ಹಫೀಜ್ ಅವರ ಈ ಟ್ವೀಟ್ ಗೆ ತಲೆದೂಗಿದ್ದಾರೆ.

ಬೆಳಗಾವಿ: ನೀರಿನಲ್ಲಿ ಸಿಲುಕಿದ್ದ 12 ದಿನದ ಬಾಣಂತಿ, ಮಗು ರಕ್ಷಣೆ

 

Related Articles

Back to top button