ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಳೆದ ಆಗಸ್ಟ್ 30ರಂದು ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಭಾರೀ ಮಳೆಯಿಂದಾದ ಪ್ರವಾಹ ನೂರಾರು ಕೋಟಿ ಹಾನಿಗೆ ಕಾರಣವಾಗಿದೆ.
ಬೆಂಗಳೂರು ಮೂಲದ ಪ್ರಮುಖ ಐಟಿ ಮತ್ತು ಬ್ಯಾಂಕಿಂಗ್ ಕಂಪನಿಗಳು ಈ ಪ್ರವಾಹದಿಂದಾಗಿ ಒಟ್ಟು 225 ಕೋಟಿ ಕಳೆದುಕೊಂಡಿರುವುದಾಗಿ ತಿಳಿಸಿವೆ.
ಇದಕ್ಕೆ ಕಾರಣ ಅವರ ಸಿಬ್ಬಂದಿ 5 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡರು ಎಂದು ಕಂಪನಿಗಳನ್ನು ಪ್ರತಿನಿಧಿಸುವ ಸಂಸ್ಥೆ ತಿಳಿಸಿದೆ. ನಗರದಲ್ಲಿ ಮೂಲಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿರುವ ಸಂಘಟನೆ, ‘ಅಸಮರ್ಪಕ ಮೂಲಸೌಕರ್ಯ’ ಈಗ ಬಿಕ್ಕಟ್ಟಿನ ಮಟ್ಟ ತಲುಪಿದೆ ಎಂದು ಹೇಳಿದೆ.
ಮಹಿಳೆ ಎದುರೇ ಹಸ್ತ ಮೈಥುನ ಮಾಡಿದ ಕ್ಯಾಬ್ ಚಾಲಕ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ