Karnataka NewsLatest
ಲಕ್ಷ್ಮಿ, ಜ್ಯೋತಿಬಾ ದರ್ಶನ ಪಡೆದ ಹೆಬ್ಬಾಳಕರ್ ಕುಟುಂಬ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪುತ್ರ ಮೃಣಾಲ ಹೆಬ್ಬಾಳಕರ್ ವಿವಾಹದ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕುಟುಂಬದ ಸದಸ್ಯರು ಸೋಮವಾರ ಮನೆಯ ಆರಾಧ್ಯದೈವ ಶ್ರೀ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನೂತನ ದಂಪತಿ ಜೊತೆಗೆ ಎರಡೂ ಕುಟುಂಬದ ಸದಸ್ಯರು ಸಂಪ್ರದಾಯದ ಪ್ರಕಾರ ಜ್ಯೋತಿಬಾ ಮತ್ತು ಕೊಲ್ಹಾಪುರ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿದಿಗೆ ತೆರಳಿ ಪೂಜೆ ಹಾಗೂ ಅಭಿಷೇಕ ನೆರವೇರಿಸಿದರು.ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ್ ಮತ್ತು ಭದ್ರಾವತಿ ಶಾಸಕ ಸಂಗಮೇಶ್ ಅವರ ಸಹೋದರ ಬಿ.ಕೆ.ಶಿವಕುಮಾರ ಅವರ ಪುತ್ರಿ ಡಾ.ಹಿತಾ ವಿವಾಹ ನ.27ರಂದು ನೆರವೇರಿರುವುದನ್ನು ಇಲ್ಲಿ ಸ್ಮರಿಸಬಹುದು.
ಮಂಗಲ ಕಾರ್ಯದ ನಂತರ ಮನೆ ದೇವರು ಮತ್ತು ಇನ್ನಿತರ ಆರಾಧ್ಯ ದೇವರ ದರ್ಶನ ಪಡೆಯುವ ಸಂಪ್ರದಾಯವನ್ನು ನವದಂಪತಿ ಹಾಗೂ ಕುಟುಂಬ ಸದಸ್ಯರು ನೆರವೇರಿಸಿದರು.



