
ಪ್ರಗತಿವಾಹಿನಿ ಸುದ್ದಿ: ಪ್ರವಾಸಿಗರ ಹಲಿಕಾಪ್ಟರ್ ಪತನಗೊಂಡು ಹಡ್ಸನ್ ನದಿಗೆ ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿ 6 ಜನರು ಸಾವನ್ನಪ್ಪಿರುವ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ಮೃತರನ್ನು ಸ್ಪೇನ್ ಮೂಲದ ಕುಟುಂಬ ಹಾಗೂ ಪೈಲಟ್ ಎಂದು ಗುರುತುಸಲಾಗಿದೆ. ಪ್ರವಾಸಕ್ಕೆ ಬಳಸುವ ಬೆಲ್ 206 ಹೆಲಿಕಾಪ್ಟರ್ ಅಪಘಾತಕ್ಕಿಡಾಗಿ ಹಡ್ಸನ್ ನದಿಗೆ ಬಿದ್ದಿದೆ. ಪೈಲಟ್ ಹಾಗೂ ಇಬ್ಬರು ವ್ಯಕ್ತಿಗಳು, ಮೂವರು ಮಕ್ಕಳು ಸೇರಿ ಆರು ಜನರು ಸಾವನ್ನಪ್ಪಿದ್ದಾರೆ.
ಮ್ಯಾನ್ ಹಟನ್ ಸುತ್ತಮುತ್ತಲಿನ ಪ್ರದೇಶ ವೀಕ್ಷಣೆಗೆ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಸೌಲಭ್ಯಗಳಿರುತ್ತವೆ. ಸುತ್ತಮುತ್ತಲಿನ ಪ್ರದೇಶ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣಿಸುವಾಗ ಹೆಲಿಕಾಪ್ಟರ್ ದುರಂತ ಸಂಭವಿಸಿದೆ.