ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ್ ನಾಯಿ ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೆಸ್ಕಾಂ, ಈ ಸಂಬಂಧ ಸ್ಮಾರ್ಟ್ ಸಿಟಿ ಕಾರ್ಯನಿರ್ವಾಹಕ ಎಂಜಿನಿಯರ್ ಗೆ ಖಾರವಾಗಿ ಎಚ್ಚರಿಕೆ ಪತ್ರ ಬರೆದಿದೆ.
ಪತ್ರದ ಸಾರಾಂಶ ಈ ರೀತಿ ಇದೆ –
KPTCL SMART CITY ROAD White taping ಮಾಡಿದ್ದರಿಂದ ಹೆಸ್ಕಾಂ LT Line Vertical Clearance ಅಂತರ ಕಡಿಮೆಯಾಗಿದೆ. ಇದರಿಂದಾಗಿ ವಿದ್ಯುತ್ ಅಪಘಾತಗಳು ಆಗುವ ಸಂಭವವಿರುತ್ತದೆ. ಸದರಿ ವಿಷಯವನ್ನು ತಮಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿದ್ದು, ಹಾಗೂ ಸದರಿ ವಿಷಯವು ಕೂಡ ತಮಗೆ ತಿಳಿದ ವಿಚಾರವಾಗಿದೆ. LT Line UG Cable ಕಾಮಗಾರಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೊಂಡಿದ್ದು ಪ್ರಾರಂಭ (ಚಾರ್ಜ) ಮಾಡುವ ಹಂತದಲ್ಲಿದೆ. ಆದ್ದರಿಂದ ಅದಷ್ಟು ಬೇಗ LT UG Cable ಚಾರ್ಜ ಮಾಡಿ LT Overhead Line ನನ್ನು ತೆರವುಗೊಳಿಸಿ ಯಾವುದೇ ವಿದ್ಯುತ್ ಅಪಚಾರಕ್ಕೆ ಅವಕಾಶ ಕೊಡಬಾರದೆಂದು ವಿನಂತಿ.
ಸ್ಮಾರ್ಟ್ ಸಿಟಿ ಕಾಮಗಾರಿ ಸಂದರ್ಭದಲ್ಲಿ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಂತಿ ತಗುಲಿ ನಾಯಿಯೊಂದು ಸತ್ತಿತ್ತು, ಭಾರಿ ಅನಾಹುತವೊಂದು ಘಟನೆಯಿಂದ ತಪ್ಪಿದೆ. ಈ ಸಂಬಂಧ ಪ್ರಗತಿವಾಹಿನಿ ಸುದ್ದಿ ಪ್ರಕಟಿಸಿತ್ತು.
ಸ್ಮಾರ್ಟ್ ಅವಾಂತರಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ