
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ ಸಂಪುಟ ವಿಸ್ತರಣೆಗೆ ಪಕ್ಷದ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಪ್ರಕ್ರಿಯೆ. ಸಂಪುಟ ವಿಸ್ತರಣೆ ವಿಚಾರ ನಿರ್ಧಾರದಲ್ಲಿ ಹೈಕಮಾಂಡ್ ಈ ಹಿಂದಿಗಿಂತ ಎರಡು ಹೆಜ್ಜೆ ಮುಂದುವರಿದಿದೆ. ಪಕ್ಷದ ಹಿರಿಯರು ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿ ಒಂದು ನಿರ್ಧಾರ ಪ್ರಕಟಿಸಿ ಸೂಚನೆ ನೀಡಿದ ನಂತರ ಸಂಪುಟ ವಿಸ್ತರಣೆಗೆ ಕಾರ್ಯಪ್ರವೃತ್ತರಾಗುವುದಾಗಿ ಅವರು ಹೇಳಿದರು.
ಇದೇ ವೇಳೆ ಡಿ.30ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮೀಸಲಾತಿಗೆ ಸಂಬಂಧಿಸಿದಂತೆ ಕೆಲ ಜಾತಿಗಳು ಗಡುವು ನೀಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಗಡುವಿನ ಪ್ರಶ್ನೆಯೇ ಇಲ್ಲ, ಈಗಾಗಲೇ ಅಂತಿಮ ವರದಿ ಕೈಸೇರಿದ್ದು ಅದನ್ನು ಸರ್ವಪಕ್ಷಗಳ ಸಭೆ ನಡೆಸಿ ಪರಿಶೀಲಿಸಲಾಗುವುದು. ಇದು ಬಹು ಸೂಕ್ಷ್ಮ ವಿಚಾರವಾದ್ದರಿಂದ ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆಶೋತ್ತರ ಪರಿಗಣಿಸಿ ಅರ್ಹ ಎಲ್ಲರಿಗೂ ಸೌಲಭ್ಯ ನೀಡಬೇಕಾದುದು ಸರಕಾರದ ಕರ್ತವ್ಯ. ಆದರೆ ಈಗಾಗಲೇ ಮೀಸಲಾತಿ ಹೊಂದಿರುವವರಿಗೆ ಇದರಿಂದ ತೊಂದರೆಯಾಗಬಾರದು. ಎಂಬುದನ್ನೂ ಪರಿಗಣಿಸಬೇಕಾಗುತ್ತದೆಈ ಕುರಿತು ಹಿರಿಯರ ಮಾರ್ಗದರ್ಶನವೂ ಇದೆ ಎಂದರು.
ಇದು ಒಂದು ಸಮುದಾಯದ ಪ್ರಶ್ನೆ ಅಲ್ಲ, ಹಿಂದುಳಿದ ವರ್ಗಗಳಲ್ಲೂ ನೂರಾರು ಕೆಟಗರಿಗಳಿವೆ. ಅವುಗಳಲ್ಲಿ 200ಕ್ಕೂ ಹೆಚ್ಚು ಉಪಜಾತಿಗಳಿವೆ. ಹೀಗಾಗಿ ಇದು ಸೂಕ್ಷ್ಮ ವಿಚಾರವಾದ್ದರಿಂದ ನೋಡಿ ಹೆಜ್ಜೆಯಿಡಬೇಕಿದೆ ಎಂದರು.
ಈಗಾಗಲೇ ತಜ್ಞರು ಹಲವು ಆಯಾಮಗಳ ವರದಿ ನೀಡಿದ್ದಾರೆ. ಇನ್ನೂ ಹಲವು ಆಯಾಮಗಳಿದ್ದು ಆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
*ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಸ್ಫೋಟ; ಇಬ್ಬರು ವಶಕ್ಕೆ*
https://pragati.taskdun.com/mixiblastdtdc-courier-officehasana/
*ಫಾರ್ಮಾ ಲ್ಯಾಬ್ ನಲ್ಲಿ ಬೆಂಕಿ ದುರಂತ; ನಾಲ್ವರ ಸಜೀವ ದಹನ*
https://pragati.taskdun.com/andrapradeshafire-accidentfarma-compeny-lab4-death/
*ಬೆಳಗಾವಿಯಲ್ಲಿ ಹೂಡಿಕೆಗೆ ರಾಕ್ ಸ್ಪೇಸ್ ಕಂಪನಿ ಆಸಕ್ತಿ, ಸಚಿವರ ಜತೆ ಮಾತುಕತೆ*
https://pragati.taskdun.com/rock-space-company-interested-in-investing-in-belagavi-talks-with-minister/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ