Kannada NewsKarnataka NewsNationalPolitics
*ಮಳೆ ಅಬ್ವರಕ್ಕೆ ಕೊಚ್ಚಿಕೊಂಡು ಹೋದ ಹೆದ್ದಾರಿ: ಕುಮಟಾ-ಶಿರಸಿ ರಸ್ತೆ ಸಂಪರ್ಕ ಕಡಿತ*

ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮಳೆರಾಯ ಈಗಾಗಲೇ ಹಲವು ಕಡೆ ಹಲವು ಅವಾಂತರ ಸೃಷ್ಠಿಸಿದ್ದಾನೆ. ಮಳೆಯ ಅಬ್ಬರಕ್ಕೆ ಕಾರವಾರದ ದೇವಿಮನೆ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿಕೊಂಡು ಹೋಗಿ ಕುಮಟಾ – ಶಿರಸಿ ರಸ್ತೆ ಸಂಪರ್ಕ ಕಡಿತವಾಗಿದೆ.
ಕಳೆದ ನಾಲ್ಕೈದು ದಿನದ ಹಿಂದೆ ಭಾರೀ ಮಳೆಯಿಂದಾಗಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ದೇವಿಮನೆ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿತ್ತು. ರಸ್ತೆ ಅಗಲೀಕರಣ ಹಿನ್ನಲೆ ಬಂಡೆ ಒಡೆದ ಪರಿಣಾಮ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿತ್ತು.
ರಾಷ್ಟ್ರೀಯ ಹೆದ್ದಾರಿ 766 E ನ ಹೆದ್ದಾರಿ ಕಾಮಗಾರಿಯ ಹಿನ್ನಲೆ ಅದರ ಪಕ್ಕದಲ್ಲೇ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇದೀಗ ಎಡೆಬಿಡದೆ ಮಳೆ ಸುರಿದ ಪರಿಣಾಮ ಬೆಣ್ಣೆ ಹೊಳೆ ಹಳ್ಳದ ನೀರು ಹರಿದು ಬಂದು ತಾತ್ಕಾಲಿಕ ರಸ್ತೆಯೂ ಸಂಪೂರ್ಣ ನಾಶವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




