Belagavi NewsBelgaum NewsKarnataka News

*ಬಾಲಕಿ ಮೇಲೆ ಅತ್ಯಾಚಾರ: ಲೋಕೇಶ್ವರ ಮಹಾರಾಜ ಸ್ವಾಮೀಜಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಬೆಳಗಾವಿಯ ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೆಖಳಿ ಗ್ರಾಮದ ಮಠದ ಲೋಕೇಶ್ವರ ಸ್ವಾಮಿಜಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಅನಾರೋಗ್ಯದಿಂದಲೂ ಬಳಲುತ್ತಿದ್ದ ಬಾಲಕಿಯನ್ನು ಮನೆಗೆ ಹೋಗುತ್ತಿದ್ದಾಗ ಕಿಡ್ನ್ಯಾಪ್ ಮಾಡಿ ಸ್ವಾಮೀಜಿ ಅತ್ಯಾಚಾರವೆಸಗಿದ್ದ.

ಲೋಕೇಶ್ವರ ಸ್ವಾಮಿ ಮೇ 13ರಂದು ಬಾಲಕಿಯನ್ನು ರಾಯಚೂರಿಗೆ ಕರೆದೊಯ್ದು ಅಲ್ಲಿ ಲಾಡ್ಜ್ ನಲ್ಲಿ ತಂಗಿದ್ದ ವೇಳೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಮೇ 14ರಂದು ಕೂಡ ಸ್ವಾಮೀಜಿ ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಾನೆ.

ಬಳಿಕ ಮೇ 16ರಂದು ಬಾಲಕಿಯನ್ನು ಬಾಗಲಕೋಟೆಗೆ ಕರೆದೊಯ್ದು ಅಲ್ಲಿಯೂ ಆಕೆಯ ಮೇಲೆ ಅತ್ಯಾಚರವೆಸಗಿ ವಿಕೃತಿ ಮೆರೆದಿದ್ದಾನೆ.

ಬಳಿಕ ಯಾರಿಗಾದರೂ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ಬಾಲಕಿಯನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಸ್ವಾಮೀಜಿ ಪರಾರಿಯಾಗಿದ್ದ.

17 ವರ್ಷದ ಸಂತ್ರಸ್ತ ಬಾಲಕಿ ನವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಬೆಳಗಾವಿ ಮೂಡಲಗಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಮೂದಲಿ ಪೊಲೀಸರು ಲೋಕೇಶ್ವರ ಮಹಾರಾಜನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


Related Articles

Back to top button