Latest

ಹಿಜಾಬ್ ಧರಿಸುವವರು ಪಾಕಿಸ್ತಾನಕ್ಕೆ ಹೋಗಲಿ; ಯತ್ನಾಳ್ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕ್ಕೇರಿದ್ದು, ರಾಜಕೀಯ ನಾಯಕರ ವಾಕ್ಸಮರಕ್ಕೂ ಕಾರಣವಾಗಿದೆ. ಹಿಜಾಬ್ ಧರಿಸಲು ಅವಕಾಶ ಬೇಕೆಂದರೆ ಅಂತವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮುಸ್ಲೀಂ ಜನಸಂಖ್ಯೆ ಶೇ.15ರಷ್ಟಿರುವಾಗಲೇ ಈ ರೀತಿಯಾದರೆ ಇನ್ನು ಶೇ.50ರಷ್ಟಾದರೆ ಗತಿಯೇನು? ತಾಲಿಬಾನ್ ಸಂಸ್ಕೃತಿಗೆ ಇಲ್ಲಿ ಅವಕಾಶ ಕೊಡುವುದಿಲ್ಲ. ಹಿಜಾಬ್ ಧರಿಸಬೇಕೆಂದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಗುಡುಗಿದರು.

ಇಂದು ಹಿಜಾಬ್ ಧರಿಸಲು ಕಾಲೇಜಿನಲ್ಲಿ ಅವಕಾಶ ಕೇಳುತ್ತಾರೆ. ನಾಳೆ ಮಸಿದಿ ಕಟ್ಟಲು ಅವಕಾಶ ಕೊಡಿ ಅಂತಾರೆ. ಇವರ ಮನಸ್ಸಿಗೆ ಬಂದಂತೆ ನಡೆದುಕೊಳ್ಳಲು ಇಲ್ಲಿ ಅವಕಾಶ ಕೊಡಲ್ಲ. ಪಾಕಿಸ್ತಾನಕ್ಕೆ, ತಾಲಿಬಾನ್ ಗೆ ಹೋಗಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳಲಿ ಎಂದರು.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವಾಗಲೂ ಮುಸ್ಲೀಂ ಪರ ಮಾತನಡುತ್ತಾರೆ. ಅವರು ಹಿಂದೂನಾ ಅಥವಾ ಇಸ್ಲಾಂ ಗೆ ಮತಾಂತರಗೊಂಡಿದ್ದಾರಾ? ಎಂಬುದನ್ನು ಹೇಳಬೇಕು. ಪ್ರತಿಭಾರಿ ಸಾಬ್ರನ್ನು ಓಲೈಸುವ ಗುಣ ಸಿದ್ದರಾಮಯ್ಯದವರದ್ದಾಗಿದೆ. ತಾವು ಇದನ್ನು ಜಾತ್ಯಾತೀತ ಎಂದು ಹೇಳಲ್ಲ. ಮುಸ್ಲೀಂರನ್ನು ತಲೆ ಮೇಲೆ ಹೊತ್ತು ಮೆರೆಸುವ ಅಗತ್ಯವೇನಿದೆ?ಎಂದು ಪ್ರಶ್ನಿಸಿದ್ದಾರೆ.
ಸರಕಾರಕ್ಕೆ ಸವಾಲು ಹಾಕಿದ ಶಾಸಕಿ

Home add -Advt

Related Articles

Back to top button