Belagavi NewsBelgaum NewsLatest
*ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಓರ್ವನ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ವಿಚಾರಣಧೀನ ಕೈದಿ ಮೇಲೆ ನಾಲ್ವರು ಸಹ ವಿಚಾರಣಾಧೀನ ಕೈದಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ನಡೆದಿದೆ.
ಹಿತೇಶ್ ಚೌವ್ಹಾಣ್ ಮಾರಣಾಂತಿಕ ಹಲ್ಲೆಗೊಳಗಾದ ಕೈದಿ. ಬಸವರಾಜ್ ದಡ್ಡಿ, ಬಸು ನಾಯ್ಕ್, ಸವಿನಾ ದಡ್ಡಿ, ವಾಘಮೋರೆ ಹಲ್ಲೆ ನಡೆಸಿದ ಕೈದಿಗಳು.
ಹಿತೇಶ್, ಆರೋಪಿಗಳ ಸಬಂಧಿ ಲಕ್ಷ್ಮಣ್ ಮೇಲೆ ಹಲ್ಲೆನಡೆಸಿ ಜೈಲು ಸೇರಿದ್ದ. ಹಿಂಡಲಗಾ ಜೈಲಿಗೆ ಬರುತ್ತಿದ್ದಂತೆ ವಿಷಯತಿಳಿದು ಹಿತೇಶ್ ಮೇಲೆ ನಾಲ್ವರು ಕೈದಿಗಳು ಮಾರಣಂತಿಕ ಹಲ್ಲೆ ನಡೆಸಿದ್ದಾರೆ. ಹಿತೇಶ್ ನ ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.




