Kannada NewsLatest

ಜೈಲಿನಲ್ಲಿಯೇ ಅನುಮಾನಾಸ್ಪದ ಸಾವನ್ನಪ್ಪಿದ ಕೊಲೆ ಆರೋಪಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊಲೆ ಆರೋಪದ ಮೇಲೆ ಹಿಂಡಲಗಾ ಜೈಲು ಸೇರಿದ್ದ ಆರೋಪಿ ಇದೀಗ ಕಾರಾಗೃಹದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಆರೋಪಿಯನ್ನು ಗುರುರಾಜ್ ದೊಡ್ಡಮನಿ ಎಂದು ಗುರುತಿಸಲಾಗಿದೆ. ಕೇರಳದ ರೌಡಿ ತಸ್ಲೀಮ್ ಕೊಲೆ ಆರೋಪದ ಮೇಲೆ ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದ ಡೊಡ್ದಮನಿ ಇದೀಗ ಜೈಲಿನಲ್ಲಿಯೇ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ನಾಲ್ಕು ದಿನಗಳಿಂದ ಎದೆನೋವಿನಿಂದ ಬಳಲುತ್ತಿರುವುದಾಗಿ ಗುರುರಾಜ್ ಹೇಳಿದ್ದ. ನಿನ್ನೆ ಸಂಜೆಯೂ ಎದೆ ನೋವು ಇರುವುದಾಗಿ ಜೈಲಿನ ಸಿಬ್ಬಂದಿ ಬಳಿ ಹೇಳಿಕೊಂಡಿದ್ದ ಇದಾದ ಕೆಲ ಗಂಟೆಗಳಲ್ಲೇ ಗುರುರಾಜ್ ದೊಡ್ಡಮನಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಗುರುರಾಜ್ ಸಾವಿಗೆ ಜೈಲು ಸಿಬ್ಬಂದಿಗಳೇ ಕಾರಣ ಎಂದು ಆತನ ಸಹೋದರ ಕಿರಣ್ ಆರೋಪಿಸಿದ್ದಾರೆ. ಗುರುರಾಜ್ ಕುಟುಂಬಸ್ಥರು ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

Home add -Advt

ರಸ್ತೆ ಗುಂಡಿ, ಟ್ರಾಫಿಕ್ ನಿಂದ ಹೆಚ್ಚಿದ ಡಿವೋರ್ಸ್ ಕೇಸ್ ಹೆಚ್ಚಳ; ದೇವೇಂದ್ರ ಫಡ್ನವಿಸ್ ಪತ್ನಿ ಆರೋಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button