Kannada NewsKarnataka NewsLatest

ಬೆಳಗಾವಿಯಲ್ಲಿ ಮಾ.19 ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಂದೂಗಳ ಮೇಲೆ ಆಗುವ ಅನೇಕ ಅನ್ಯಾಯಗಳ ವಿರುದ್ಧ ಸೆಟೆದು ನಿಲ್ಲಲು ಹಾಗೆಯೇ ಹಿಂದೂ ರಾಷ್ಟ್ರದ ಧ್ವನಿಯನ್ನು ಗಟ್ಟಿಗೊಳಿಸಲು ಮಾ.19 ರಂದು ಸಂಜೆ 5.30ಕ್ಕೆ ವಡಗಾವಿಯ ಮಾಲಿನಿ ಪರಿಸರದ ಭಾರತ ನಗರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಪಶ್ಚಿಮ ಮಹಾರಾಷ್ಟ್ರ, ಕೊಂಕಣ, ಗೋವಾ ಮತ್ತು ಗುಜರಾತ ರಾಜ್ಯ ಸಮನ್ವಯಕ ಮನೋಜ ಖಾಡಯೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಿಸಿದ ಅವರು, “ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಸಮಾನತೆ, ಬಂಧುತ್ವ ಮತ್ತು ನ್ಯಾಯ ಸಿಗುವುದು ಎಂದು ಹೇಳಲಾಗಿದೆ. ಆದರೆ ನಮ್ಮ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಆಯೋಗ, ಹಿಂದುಳಿದವರ ಅಭಿವೃದ್ಧಿ ಸಚಿವಾಲಯಗಳಿವೆ. ಬಹುಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡುವ ಯಾವುದೇ ಸಚಿವಾಲಯ- ಆಯೋಗ ಇಲ್ಲ ಎಂದರು.

ದೇಶಾದ್ಯಂತ ಕೇವಲ ಹಿಂದೂಗಳ ಮಂದಿರಗಳ ಸರಕಾರೀಕರಣ ಮಾತ್ರ ಆಗುತ್ತದೆ. ಆದರೆ ಮಸೀದಿ- ಚರ್ಚ್ ಗಳ ಸರಕಾರೀಕರಣ ಏಕಿಲ್ಲ? ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದಲ್ಲಿ ಶೈಕ್ಷಣಿಕ ಅನುದಾನ ನೀಡಲಾಗುತ್ತದೆ. ಆದರೆ ಬಹುಸಂಖ್ಯಾತ ಹಿಂದೂಗಳು ಏನು ಅಪರಾಧ ಮಾಡಿದ್ದಾರೆ? ಇದೆಲ್ಲವನ್ನೂ ನೋಡಿದರೆ, ಭಾರತದಲ್ಲಿ ನಿಜವಾಗಿಯೂ ಸೆಕ್ಯುಲರ್ (ಜಾತ್ಯತೀತ) ವ್ಯವಸ್ಥೆ ಅಸ್ತಿತ್ವದಲ್ಲಿದೆಯೇ? ಎಂಬ ಬಗ್ಗೆ ಅನುಮಾನ ಮೂಡುತ್ತದೆ. ಹಿಂದೂಗಳ ಸಾವಿರಾರು ಯುವತಿಯರನ್ನು ನಾಶಗೊಳಿಸುವ ‘ಲವ್ ಜಿಹಾದ್’, ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಸಂಕಟವಾಗಿರುವ ‘ಹಲಾಲ್ ಜಿಹಾದ್’ ಗಳಂತಹ ಈ ಸಂದರ್ಭದಲ್ಲಿ ಈ ಜಾಗೃತಿ ಸಭೆ ಸಹಾಯವಾಗಲಿದೆ ಎಂದರು.

“ಸನಾತನ ಸಂಸ್ಥೆಯ ಧರ್ಮಪ್ರಸಾರಕಿ ಸದ್ಗುರು ಸ್ವಾತಿ ಖಾಡಯೆ, ಹಿಂದೂ ಜನಜಾಗೃತಿ ಸಮಿತಿಯ ಮನೋಜ ಖಾಡಯೆ, ಹಿಂದೂ ಜನಜಾಗೃತಿ ಸಮಿತಿಯ ನ್ಯಾಯವಾದಿಗಳ ಸಂಘಟಕ ,ನ್ಯಾಯವಾದಿ ನೀಲೇಶ ಸಾಂಗೋಲಕರ ಇವರು ಮಾರ್ಗದರ್ಶನ ನೀಡಲಿದ್ದಾರೆ” ಎಂದು ಅವರು ಹೇಳಿದರು.

“ಬೆಳಗಾವಿ ಜಿಲ್ಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ವ್ಯಾಪಕ ಕಾರ್ಯ ನಡೆದಿದ್ದು, ಹಿಂದೂ ಸಂಘಟನೆಯ ಮೆರವಣಿಗೆಗಳು, ‘ಹಲಾಲ್’ ವಸ್ತು ಸ್ವೀಕರಿಸಬೇಕೆನ್ನುವ ಒತ್ತಾಯದ ವಿರುದ್ಧ ಜಾಗೃತಿ, ಮೂಡಿಸಲಾಗುತ್ತದೆ. ಇದಲ್ಲದೆ, ರಾಷ್ಟ್ರ ಮತ್ತು ಧರ್ಮಗಳ ಮೇಲೆ ಆಘಾತ ಮಾಡುವ ವಿವಿಧ ವಿಷಯಗಳ ಮೇಲೆ ಮನವಿ, ಆಂದೋಲನ, ಪತ್ರಿಕಾ ಗೋಷ್ಠಿ, ಧರ್ಮ, ಶಿಕ್ಷಣ ವರ್ಗ ಮುಂತಾದ ಮಾಧ್ಯಮಗಳಿಂದ ಜನಜಾಗೃತಿ ನಡೆದಿದೆ. ಸಭೆಯ ನಿಮಿತ್ತದಿಂದ ನಗರದಲ್ಲಿ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಪ್ರಸಾರ ಕಾರ್ಯ ನಡೆದಿದೆ” ಎಂದರು.

“ಯುವಕ ಮಂಡಳಿ, ಮಹಿಳಾ ಗುಂಪು, ಗ್ರಾಮಸ್ಥರು, ಹಿಂದುತ್ವನಿಷ್ಠರ ಸಭೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಿತ್ತಿಪತ್ರಗಳು, ಕರಪತ್ರಗಳು, ಫಲಕ ಲೇಖನ, ರಿಕ್ಷಾ, ಹೋರ್ಡಿಂಗ್, ಸಾಮಾಜಿಕ ಸಂಕೇತ ಸ್ಥಳಗಳ ಮಾಧ್ಯಮದಿಂದ ವ್ಯಾಪಕ ಸ್ತರದಲ್ಲಿ ಸಭೆಯ ಪ್ರಸಾರ ನಡೆದಿದೆ” ಎಂದು

ಸಮಿತಿಯ ಬೆಳಗಾವಿ ಜಿಲ್ಲಾ ಸಮನ್ವಯಕ ಹೃಷಿಕೇಶ ಗುರ್ಜರ, ಕರ್ನಾಟಕ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡಾ ಸುದ್ದಿಗೋಷ್ಠಿಯಲ್ಲಿದ್ದರು.

https://pragati.taskdun.com/three-days-with-her-three-days-with-another-an-engineer-shared-with-two-wives/
https://pragati.taskdun.com/pakistan-will-not-stop-the-nuclear-missile-program-even-if-there-is-no-money-says-finance-minister-ishaq-dar/
https://pragati.taskdun.com/first-case-registered-in-belgaum-fir-against-two/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button