ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೆವಾಡಿ ಠಾಣೆಯ ಪೊಲೀಸರು ದಾಳಿ ನಡೆಸಿ ಗಾಂಜಾ ಬೆಳೆದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಜಯಕುಮಾರ ಸಿನ್ನೂರರವರ ನೇತೃತ್ವದ ಅಭಿಷೇಕ ನಾಡಗೌಡರ ಪಿ.ಎಸ್.ಐ(ಪ್ರೋ) ಸಿಬ್ಬಂದಿ ಎ.ಕೆ.ಕಾಂಬಳೆ, ಎಸ್.ಎಮ್.ಅಳ್ಳಳ್ಳಿ ಆರ್.ಎಸ್.ಕೆಳಗಿನಮನಿ , ಎಚ್.ಪಿ.ನಿಡಗುಂದಿ , ಪಿ.ಎಸ್.ಕೋಚೇರಿ , ಎನ್.ಎಮ್.ಸುತಗಟ್ಟಿ ತಂಡ ದಾಳಿ ಮಾಡಿ ಗಾಂಜಾವನ್ನು ಅಕ್ರಮವಾಗಿ ಬೆಳೆದು ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದ ಬಸನಗೌಡ ರುದ್ರಗೌಡ ಪಾಟೀಲ, (೬೬), (ಸಾ: ಹಾಲಗಿಮರಡಿ ತಾ;ಜಿ.ಬೆಳಗಾವಿ) ಎನ್ನುವವನನ್ನು ಬಂಧಿಸಿದ್ದಾರೆ.
ಹೊಲದಲ್ಲಿ ಬೆಳೆದ ಹಸಿ ಗಾಂಜಾ ೧ ಕೆ.ಜಿ.೨೨೦ ಗ್ರಾಂ ತೂಕದ ಅಂದಾಜು ಬೆಲೆ ರೂ. ೧೦,೦೦೦/- ಮತ್ತು ೩೨೮ ಗ್ರಾಂ ಒಣ ಗಾಂಜಾ ಅಂದಾಜು ಬೆಲೆ ೮೦೦೦/-ರೂ ಹೀಗೆ ಒಟ್ಟು ೧ ಕೆ.ಜಿ.೫೫೮ ಗ್ರಾಂ ಗಾಂಜಾ ಅಂದಾಜು ಬೆಲೆ ೧೮೦೦೦ ಜಪ್ತ ಮಾಡಲಾಗಿದೆ. ಈ ಬಗ್ಗೆ ಹಿರೇಬಾಗೆವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ವಿಧಾನಸಭೆ ಸಚಿವಾಲಯ ಬಂದ್ ಗೆ ಕರೆ; ಸರ್ಕಾರದ ವಿರುದ್ಧ ನೌಕರರ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ