ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೇವಾಡಿ ಠಾಣೆ ಪೊಲೀಸರು ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿ 11 ಜನರನ್ನು ಬಂಧಿಸಿ, 1.60 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಕಮಕಾರಟ್ಟಿ ಗ್ರಾಮದಲ್ಲಿ ಕೆಲವರು ಜೂಜಾಟ ಆಡುತ್ತಿದ್ದಾರೆ ಎಂದು ಖಚಿತವಾದ ಮಾಹಿತಿ ಬಂದಂತೆ ಪಿಐ ವಿಜಯಕುಮಾರ ಸಿನ್ನೂರ ಮತ್ತು ಸಿಬ್ಬಂದಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ತೌಶಿಫ್ ಉಸ್ತಾದ (ಸಾ|| ಸೋಮವಾರ ಪೇಠ, ಕಿತ್ತೂರ) ಹಾಗೂ ಈತನೊಂದಿಗೆ ೧೦ ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ.೧,೬೭,೬೩೦ ಹಣ, ಇಸ್ಪೀಟ್ ಎಲೆಗಳು ಇತ್ಯಾದಿ ಸಾಮಗ್ರಿಗಳನ್ನು ಜಪ್ತಪಡಿಸಿಕೊಂಡು ಹಿರೇಬಾಗೇವಾಡಿ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ