Latest

ಹಿರೇಕೋಡಿ ಗ್ರಾಮದಲ್ಲಿ ಕೋವಿಡ್ ಸುರಕ್ಷತಾ ಕಿಟ್ ವಿತರಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಕೋವಿಡ್-19 ಪರಿಹಾರಾರ್ಥವಾಗಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಜೊಲ್ಲೆ ಉದ್ಯೋಗ ಸಮೂಹದ ಅಂಗ ಸಂಸ್ಥೆಯಾದ ಲೋಕ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘ ಯಕ್ಸಂಬಾ ಇದರ ಅಡಿಯಲ್ಲಿ ಕಟ್ಟಡ ಕಾರ್ಮಿಕರಿಗೆ, ಅಂಗನವಾಡಿ,ಆಶಾ ಕಾರ್ಯಕರ್ತರಿಗೆ ಕೋವಿಡ್-19 ಸುರಕ್ಷತಾ ಕಿಟ್‌ಗಳನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿತರಿಸಿದರು.

ಬಳಿಕ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ಕೊರೊನಾ ವಾರಿರ‍್ಸ್ ಆಗಿ ಸೇವೆ ಸಲ್ಲಿಸಿದ ವೈಧ್ಯರು, ಅಂಗನವಾಡಿ, ಆಶಾಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದೆ. ಕೊರೊನಾ ಲಾಕಡೌನ್ ಸಂದರ್ಭದಲ್ಲಿ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ದಿನಸಿ ಆಹಾ ಹಾಗೂ ಸುರಕ್ಷತಾ ಕೀಟ್‌ಗಳನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅನೀತಾ ದೇವಡಕರ, ಭರತ ದೇವಡಕರ, ರೇವಯ್ಯ ಹಿರೇಮಠ, ಸುಭಾಷ್ ಚೌಗಲಾ,ಸುದರ್ಶನ ಚೌಗಲಾ, ಶಂಕರ ಮಾಯನ್ನವರ, ಹಾಗೂ ಅಂಗನವಾಡಿ,ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತಿ ಕಾರ್ಮಿಕರು ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಮತ್ತೆ ದಿಢೀರ್ ಕೊರೋನಾ ಹೆಚ್ಚಳ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button