Latest

ಶಾಲೆಯಲ್ಲಿ ಬಾಂಬ್ ಇದೆ ಎಂದು ಬೆದರಿಕೆ

ಪ್ರಗತಿವಾಹಿನಿ ಸುದ್ದಿ; ಅಮೃತ್‌ಸರ: ಅಮೃತಸರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಂಬ್ ಹಾಕುವುದಾಗಿ ಬಂದ ಬೆದರಿಕೆಯ ಸಂದೇಶವೊಂದು ಪಂಜಾಬ್ ಪೊಲೀಸರ ನಿದ್ದೆಗೆಡಿತ್ತು.

ಬುಧವಾರ ಮಧ್ಯಾಹ್ನ ಅಮೃತಸರದ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಬಾಂಬ್ ಹಾಕುವುದಾಗಿ ಬೆದರಿಯ ಸಂದೇಶವೊಂದು ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರ ಮೊಬೈಲ್‌ಗೆ ಬಂದಿತ್ತು. ಈ ಸಂದೇವು ಉರ್ದು ಮತ್ತು ಇಂಗ್ಲೀಷ್‌ನಲ್ಲಿ ಬರೆಯಲಾಗಿತ್ತಲ್ಲದೇ ಪಾಕಿಸ್ತಾನದ ಚಿಹ್ನೆ ಹೊಂದಿತ್ತು. ಕೆಲವೇ ನಿಮಿಷಗಳಲ್ಲಿ ಈ ಸಂದೇಶ ಪಂಜಾಬದಾದ್ಯಂತ ವೈರಲ್ ಆಗಿತ್ತು. ಶಾಲೆಯ ವಿದ್ಯಾರ್ಥಿಗಳು ಪಾಲಕರಲ್ಲದೇ ಪಂಜಾಬದಾದ್ಯಂತ ಆತಂಕದ ಛಾಯೆ ಕವಿದಿತ್ತು. ಗಾಬರಿಗೊಂಡ ಪಂಜಾಬ್ ಪೊಲೀಸರು ಮುಂಜಾಗೃತಾ ಕ್ರಮವಾಗಿ ಶಾಲೆಯಲ್ಲಿ ಭದ್ರತೆಗಾಗಿ ಕಮಾಂಡೋಗಳನ್ನು ನಿಯೋಜಿಸಿದರು.

ಇನ್ನೊಂದೆಡೆ ಪೊಲೀಸ್ ಇಲಾಖೆ ಬಾಂಬ್ ಬೆದರಿಕೆಯೊಡ್ಡಿದರವರ ಪತ್ತೆಗೆ ತನಿಖೆ ಶುರು ಮಾಡಿತು. ಶಾಲೆಯ ಆವರಣದಲ್ಲಿ ಬಾಂಬ್ ಪತ್ತೆಯ ಸ್ಕ್ವಾಡ್ ಕಾರ್ಯಾಚರಣೆಗಳಿಯಿತು.

ಆದರೆ ಗುರುವಾರ ಈ ಬಾಂಬ್ ಬೆದರಿಕೆ ಸಂದೇಶ ಕಳಿಸಿದವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶಾಲೆಯ 9ನೇ ಕ್ಲಾಸಿನ ಮೂವರು ವಿದ್ಯಾರ್ಥಿಗಳ ಕಿತಾಪತಿ ಇದೆಂದು ಗೊತ್ತಾಗಿದೆ. ಬಾಂಬ್ ಬೆದರಿಕೆಯ ಹುಸಿ ಸಂದೇಶ ಇದಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Home add -Advt

BEO ಕಚೇರಿ ಸೂಪರಿಂಟೆಂಡೆಂಟ್ ಆತ್ಮಹತ್ಯೆ

https://pragati.taskdun.com/latest/beosuperitendentshivanandsuicidemadikeri/

Related Articles

Back to top button