ಆಡಳಿತಮಂಡಳಿ ಮಾತುಕತೆ ಬಳಿಕ ವಿವಾದ ಸುಖಾಂತ್ಯ
ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲೆಯ ಹೊಳೆನರಸಿಪುರದ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗಡ್ಡ ವಿವಾದ ಭುಗಿಲೆದ್ದಿದೆ. ಆಡಳಿತ ಮಂಡಳಿ ಆದೇಶಕ್ಕೆ ಗರಂ ಆದ ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್ ಮೊರೆ ಹೋಗಿದ್ದಾರೆ.
ಹೊಳೆನರಸಿಪುರದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಎರಡು ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಕ್ಲೀನ್ ಶೇವ್ ಮಾಡಬೇಕು, ಸ್ವಚ್ಛ ಬಟ್ಟೆ ಧರಿಸಬೇಕು. ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳಿಗೆ ಶುಶ್ರೂಷೆ ಮಾಡಬೇಕು. ರೋಗಿಗಳಿಗೆ ನಿಮ್ಮನ್ನು ನೋಡಿದರೆ ತನ್ನನ್ನು ಗುಣಪಡಿಸುತ್ತಾರೆ ಎಂಬ ಉತ್ತಮ ಭಾವನೆ ಬರಬೇಕು. ಕಾಲೇಜು ನಿಯಮದಂತೆ ವಿದ್ಯಾರ್ಥಿಗಳು ಗಡ್ಡ ಟ್ರಿಮ್ ಮಾಡಿ ಇಲ್ಲವೇ ಶೇವ್ ಮಾಡಿ ಎಂದು ಸೂಚಿಸಿದ್ದರು.
ಆಡಳಿತ ಮಂಡಳಿ ಆದೇಶ ತಪ್ಪಾಗಿ ಭಾವಿಸಿದ ಜಮ್ಮು-ಕಾಶ್ಮೀರ ಮೂಲದ 13 ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯ ಪಾಲನೆಗೆ ಅಡ್ಡಿ ಮಾಡುವ ಉದ್ದೇಶದಿದ ಈರೀತಿ ಆದೇಶ ಹೊರಡಿಸಲಾಗಿದೆ. ತಮ್ಮ ಮೇಲೆ ಒತ್ತಡ ಹಾಕಿದ್ದಾರೆ ಎಂದು ವಿವಾದ ಸೃಷ್ಟಿಸಿದ್ದರು. ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದೀಗ ವಿದ್ಯಾರ್ಥಿಗಳ ಜೊತೆ ಕಾಲೇಜು ಆಡಳಿತ ಮಂಡಳಿ ಮಾತುಕತೆ ನಡೆಸಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ಕಾಲೇಜು ನಿಯಮದಂತೆ ಶಿಸ್ತಿನಿಂದ ಇರಬೇಕು. ಗಡ್ಡ ಟ್ರಿಮ್ ಮಾಡಲು ಸೂಚಿಸಿದ್ದಾರೆ. ಇದರಿಂದ ನಿಮ್ಮ ಸಂಪ್ರದಾಯ ಪಾಲನೆಗೆ ಅಡ್ಡಿಯಾಗಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಇದಕ್ಕೆ ಒಪ್ಪಿದ್ದಾರೆ. ಅಲ್ಲದೇ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ನಮ್ಮ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದೆ. ಹಾಗಾಗಿ ಈ ವಿಷಯ ಇಲ್ಲಿಗೆ ಕೈಬಿಡುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ