ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವ್ಯಕ್ತಿಯೋರ್ವರನ್ನು ಹನಿಟ್ರ್ಯಾಪ್ ಗೆ ಕೆಡವಬೇಕೆನ್ನುವ ಯತ್ನ ನಡೆಸಿದ್ದ ಆರೋಪದ ಮೇಲೆ ಐವರು ಯು ಟ್ಯೂಬ್ ಪತ್ರಕರ್ತರನ್ನು ಬಂಧಿಸಲಾಗಿದೆ.
ವ್ಯಕ್ತಿಯೊಬ್ಬರನ್ನು ಬೆಳಗಾವಿಯ ಹೊಟೆಲ್ ಒಂದಕ್ಕೆ ಕರೆಸಿಕೊಂಡು ಮೂವರು ಯುವತಿಯರು ಮತ್ತು ಇಬ್ಬರು ಯುವಕರು ಅವರನ್ನು ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲೆ ಮಾಡಲು ಮುಂದಾಗಿದ್ದರು. ವಿಷಯ ತಿಳಿದ ಮಾಳಮಾರುತಿ ಠಾಣೆಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಅಥಣಿಯ ರಘುನಾಥ ಧುಮಾಳೆ, ರಾಮದುರ್ಗದ ಸದಾಶಿವ ಚಿಪ್ಪಲಕಟ್ಟಿ, ಸವದತ್ತಿಯ ಸಂಗೀತಾ ಕಣಕಿಕೊಪ್ಪ, ಗೌರಿ ಲಮಾಣಿ, ಮಂಜುಳಾ ಜಟ್ಟೆನ್ನವರ್ ಬಂಧಿತರು. ಇವರೆಲ್ಲ ಪ್ರೈಮ್ ನ್ಯೂಸ್ ಯು ಟ್ಯೂಬ್ ಚಾನೆಲ್ ಐಡಿ ಕಾರ್ಡ್ ಗಳನ್ನು ಹೊಂದಿದ್ದರು.
ಆರಂಭದಲ್ಲಿ 10 ಲಕ್ಷ ರೂ. ನೀಡುವಂತೆ ಕೇಳಿದ್ದ ಆರೋಪಿಗಳು ನಂತರ 5 ಲಕ್ಷ ರೂ. ಗೆ ಒಪ್ಪಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.
ಎಸಿಪಿ ನಾರಾಯಣ ಬರ್ಮನಿ ನೇತೃತ್ವದಲ್ಲಿ, ಇನಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ