
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೂತನ ಮೇಯರ್ ಆಗಿ ಆಯ್ಕೆಯಾದ ಮಂಗೇಶ್ ಪವಾರ್ ಹಾಗೂ ಉಪಮೇಯರ್ ವಾಣಿ ಜೋಶಿ ಅವರನ್ನು ಬೆಳಗಾವಿ ಗ್ರಾಮಂತರ ಬಿಜೆಪಿ ವತಿಯಿಂದ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ,ನಗರ ಸೇವಕರಾದ ಗಿರೀಶ್ ದೊಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ, ಬಿಜೆಪಿ ಮುಖಂಡರಾದ ರಮೇಶ್ ದೇಶಪಾಂಡೆ ಉಪಸ್ಥಿತರಿದ್ದರು.
ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ , ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶನೂರ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಸುಭಾಷ್ ಸಣ್ಣವೀರಪ್ಪನವರ,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಶ್ರೀಕರ ಕುಲಕರ್ಣಿ, ಪ್ರಮೋದ್ ನುಗ್ಗಾನಟ್ಟಿ, ವಿಠ್ಠಲ ಸಾಯಣ್ಣವರ,ವೀರಭದ್ರ ಪೂಜಾರಿ, ಶ್ರೀಧರ್ ಸಲಬಣ್ಣವರ,ರವಿ ತುರಮರಿ ಹಾಗೂ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.