ಭೀಕರ ಅಪಘಾತ: ಶಿರಸಿ ಮೂಲದ ಅಶೋಕ ಹೆಗಡೆ ಸಾವು

ಪ್ರಗತಿವಾಹಿನಿ ಸುದ್ದಿ, ಉಜಿರೆ: ಇಲ್ಲಿಗೆ ಸಮೀಪ ನಿಡಿಗಲ್ ಎಂಬಲ್ಲಿ ಸ್ಕಾರ್ಪಿಯೋ ವಾಹನ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಉಜಿರೆ ಕೇಲಂಗಿ ನಿವಾಸಿ ಅಶೋಕ ರಾಮಚಂದ್ರ ಹೆಗಡೆ (55) ನಿಧನರಾಗಿದ್ದಾರೆ.

ಅಶೋಕ ಮುಂಡಾಜೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾಗಿ ಕಳೆದ 25 ವರ್ಷಗಳಿಗೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದರು. ಅಶೋಕ ಮೂಲತಃ ಶಿರಸಿ ತಾಲೂಕಿನ ಹೂತನಜಾನ್ಮನೆ ನಿವಾಸಿ. ಉಜಿರೆಯಲ್ಲಿ ಸುಮಾರು 45 ವರ್ಷದಿಂದ ವಾಸವಾಗಿದ್ದರು.

ಮಂಗಳವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಸ್ಕಾರ್ಪಿಯೋ ವಾಹನ ಬಂದು ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡ ಅಶೋಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಅಶೋಕ ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಸಹೋದರ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button