ಪ್ರಗತಿ ವಾಹಿನಿ ಸುದ್ದಿ, ಮಂಡ್ಯ – ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ರೋಗಿಯೊಬ್ಬರ ಕಾಲನ್ನು ಶಸ್ತ್ರ ಚಿಕಿತ್ಸೆ ನಡೆಸಿ ಕತ್ತರಿಸಿದ ಆಸ್ಪತ್ರೆಯ ಸಿಬ್ಬಂದಿ, ಕತ್ತರಿಸಿದ ಕಾಲನ್ನು ಪತ್ನಿಯ ಕೈಗೆ ಕೊಟ್ಟ ಅಮಾನವೀಯ ಘಟನೆ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಪ್ರಕಾಶ ಎಂಬುವವರು ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಮಂಗಳವಾರ ಶಸ್ತ್ರ ಚಿಕಿತ್ಸೆ ನಡೆಸಿ ಗ್ಯಾಂಗ್ರಿನ್ ಆಗಿದ್ದ ಕಾಲನ್ನು ವೈದ್ಯರು ಕತ್ತರಿಸಿದ್ದಾರೆ. ಬಳಿಕ ಅದನ್ನು ಹೂಳುವಂತೆ ಪ್ರಕಾಶ ಅವರ ಪತ್ನಿ ಭಾಗ್ಯಮ್ಮ ಅವರಿಗೆ ಕೊಟ್ಟಿದ್ದಾರೆ.
ಪತಿಯ ಕತ್ತರಿಸಿದ ಕಾಲು ಹಿಡಿದು ಭಾಗ್ಯಮ್ಮ ಕಣ್ಣೀರು ಹಾಕುತ್ತಿದ್ದ ದೃಷ್ಯ ಮನಕಲಕುವಂತಿತ್ತು. ಕತ್ತರಿಸಿದ ಕಾಲನ್ನು ಹೂಳಲು ಸಿಬ್ಬಂದಿ ಸಾವಿರ ರೂ. ಹಣ ಕೇಳಿದ್ದಾರೆ ಎಂದು ಭಾಗ್ಯಮ್ಮ ಆರೋಪಿಸಿದ್ದಾರೆ.
ನಮ್ಮ ಸಿಬ್ಬಂದಿ ಕತ್ತರಿಸಿದ ಕಾಲನ್ನು ರೋಗಿಯ ಪತ್ನಿಯ ಕೈಗೆ ನೀಡಿದ್ದು ತಪ್ಪು. ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ನಾನು ಅದನ್ನು ವಾಪಸ್ ಪಡೆದು ನಾವೇ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿಸಿದ್ದೇನೆ ಎಂದು ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಸರಕಾರಿ ನೌಕರರಿಗೆ CM ನೀಡಿದ ಮತ್ತೊಂದು ಕರೆ ಏನು?
https://pragati.taskdun.com/politics/cm-basavaraj-bommai7th-pay-commissioncotoberannounce/
https://pragati.taskdun.com/latest/women-murdersilver-anklestrajastan/
https://pragati.taskdun.com/national-news/caught-on-cctv-andhra-man-beheads-wife-walks-with-severed-head/
https://pragati.taskdun.com/belagavi-news/rare-treatment-for-women-bims-doctor-sarvived-2-womens-from-danger/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ