ಪ್ರಗತಿವಾಹಿನಿ ಸುದ್ದಿ ; ಬೆಂಗಳೂರು: ಉಕ್ರೇನ್ ರಷ್ಯಾ ಯುದ್ಧ ರಾಜ್ಯದ ಮೇಲೂ ಸಹ ಪರಿಣಾಮ ಬೀರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹೋಟೆಲ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇದಾಗಿದೆ. ದೇಶದಲ್ಲಿ ಅಡುಗೆ ಎಣ್ಣೆ ದರ ಏರುತ್ತಲ್ಲೇ ಇದೆ. ಹಾಗಾಗಿ ಹೋಟೆಲ್ ನಲ್ಲಿ ತಿಂಡಿ ತಿನಿಸುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಹಾಲಿನ ದರವೂ ಏರಿಕೆ ಆಗುವ ಸಾಧ್ಯತೆ ಇದೆ. ಅಧಿವೇಶನ ಮುಗಿದ ಬೆನ್ನಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಸರ್ಕಾರ ಚಿಂತನೆ ನಡೆಸಿದೆ.14 ಹಾಲು ಒಕ್ಕೂಟಗಳ ಒತ್ತಡಕ್ಕೆ ಮಣಿದು ಹಾಲಿನ ದರ ಪರಿಷ್ಕರಣೆ ಮಾಡುವ ಎಲ್ಲ ಸಾಧ್ಯತೆ ಇದೆ.
ಎಣ್ಣೆ, ಹಾಲು ಮತ್ತು ಹಲವಾರು ಪದಾರ್ಥಗಳ ಬೆಲೆ ಹೆಚ್ಚಾಗುತ್ತಿರುವ ಕಾರಣ ಹೋಟೆಲ್ ದರ ಹೆಚ್ಚಳದ ಸುಳಿವನ್ನ ಈಗಾಗಲೇ ಹೋಟೆಲ್ ಮಾಲೀಕರ ಸಂಘ ನೀಡಿದ್ದು, ಹೋಟೆಲ್ಗಳಲ್ಲಿ ಏಪ್ರಿಲ್ 1ರಿಂದಲೇ ದರ ಏರಿಕೆ ಮಾಡುವ ಚಿಂತನೆ ನಡೆದಿದೆ. ಹೋಟೆಲ್ ಇನ್ನು ದುಬಾರಿ ಆಗಲಿದೆ. ಎಂದು ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಅಡಿಕೆ ನಿಷೇಧ ವಿಚಾರ; ಸ್ಪಷ್ಟನೆ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ