Latest

*ಮನೆ ಮೇಲ್ಛಾವಣಿ ಕುಸಿದು ದುರಂತ: ಅಕ್ಕ-ತಮ್ಮ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದಿದೆ.

14 ವರ್ಷದ ಗೀತಾ ಆದಾಪುರಮಹ ಹಾಗೂ ಸಹೋದರ 10 ವರ್ಷದ ರುದ್ರಯ್ಯ ಮೃತ ಮಕ್ಕಳು. ಮಕ್ಕಳಿಬ್ಬರಿಗೂ ಶಾಲೆಗೆ ಹೋಗಿ ಎಂದು ಹೇಳಿ ತಂದೆ-ತಾಯಿ ಹೊಲಕ್ಕೆ ಹೋಗಿದ್ದರು. ಇದೇ ವೇಳೆ ಮನೆಯಲ್ಲಿದ್ದ ಅಜ್ಜ ಮನೆಯಿಂದ ಹೊರ ಹೋಗಿದ್ದರು. ಅಜ್ಜಿ ಕೂಡ ಆಗಷ್ಟೇ ಮನೆಯಿಂದ ಹೊರಗಡೆ ಬಂದು ಕುಳಿತಿದ್ದರು.

ಶಾಲೆಗೆ ಇಂದು ಮೊದಲದಿನವಾದ್ದರಿಂದ ಇಂದು ಶಾಲೆಗೆ ಹೋಗದೇ ಮಕ್ಕಳಿಬ್ಬರೂ ಮನೆಯಲ್ಲಿಯೇ ಇದ್ದರು. ಮನೆಯಲ್ಲಿ ಮೊಬೈಲ್ ನೋಡುತ್ತಿದ್ದ ಅಕ್ಕ ಗೀತಾ ಹಾಗೂ ತಮ್ಮ ರುದ್ರಯ್ಯ ಮೇಲೆ ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

ಅವಶೇಷಗಳಡಿ ಸಿಲುಕಿದ್ದ ಮಕ್ಕಳ ಮೃತದೇಹವನ್ನು ಹೊರ ತೆಗೆಯಲಾಗಿದೆ. ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button