Karnataka News
*ಗಂಡನ ಮನೆಯವರ ಕಿರುಕುಳ: ಆತ್ಮಹತ್ಯೆಗೆ ಶರಣಾದ ಗೃಹಿಣಿ*

ಪ್ರಗತಿವಾಹಿನಿ ಸುದ್ದಿ : ಗಂಡನ ಮನೆಯವರ ಕಿರುಕುಳಕ್ಕೆ ಗೃಹಿಣಿಯೊಬ್ಬಳು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ಗದಗ ರಸ್ತೆಯ ಪ್ರಕಾಶ ಕಾಲೋನಿಯ ಮಲ್ಲಿಕಾರ್ಜುನ ನಗರದ ನಿವಾಸಿ ಹಾರಿಕಾ ಗೋಟಿಮುಕ್ಕಲ್ (23) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ.
ಈಕೆಗೆ ಗಂಡ ಪ್ರವೀಣ ಗೋಟಿಮುಕ್ಕಲ್, ಸೇರಿದಂತೆ ಕುಟುಂಬಸ್ಥರು ಮಾನಸಿಕ ಹಿಂಸೆ ನೀಡಿದ್ದಾರೆಂದು, ಇದೇ ಕಾರಣಕ್ಕೆ ಏಪ್ರಿಲ್ 14 ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆಂದು ಮೃತ ಹಾರಿಕಾಳ ಕುಟುಂಬಸ್ಥರು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




