Uncategorized

ಯಾರಿಗೆ ಎಷ್ಟು ಲಂಚ?; ಆನ್ ಲೈನ್ ನಲ್ಲಿ ರೇಟ್ ಕಾರ್ಡ್ ಬಹಿರಂಗಪಡಿಸಿ ಪೊಲೀಸ್ ಸಿಬ್ಬಂದಿ ಅಮಾನತು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಯಾರಿಗೆ ಎಷ್ಟು ಲಂಚ ಎಂಬುದರ ವಿವರವುಳ್ಳ ಪೊಲೀಸ್ ಠಾಣೆಯ ರೇಟ್ ಕಾರ್ಡ್ ಒಂದು ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದ್ದು ಭ್ರಷ್ಟಾಚಾರದ ಬಹಿರಂಗ ಪ್ರದರ್ಶನಕ್ಕೆ ಪೊಲೀಸ್ ಚೌಕಿಯ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ.

ಗ್ರೇಟರ್ ನೋಯ್ಡಾದ ಜೇವರ್ ಪೊಲೀಸ್ ಠಾಣೆಗೆ ಸಂಬಂಧಿಸಿದ ನೀಮ್ಕಾ ಪೊಲೀಸ್ ಚೌಕಿಯ ಅಧಿಕಾರಿಗಳಿಗೆ ಲಂಚ ನೀಡುವ ರೇಟ್ ಕಾರ್ಡ್‌ನ ಚಿತ್ರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಯಾವ್ಯಾವ ಪೊಲೀಸ್ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಬೇಕೆಂಬ ವಿವರ ಈ ರೇಟ್ ಕಾರ್ಡ್ ನಲ್ಲಿದೆ.

ಇದೇ ವೇಳೆ ‘ಯುವ ರಾಜಕಾರಣಿ’ ಮತ್ತು ಮಾಧ್ಯಮದವರಿಗೆ ನೀಡುತ್ತಿರುವ ಲಂಚದ ವಿರಗಳನ್ನು ಸಹ ಇದರಲ್ಲಿ ನಮೂದಿಸಲಾಗಿದೆ. ಈ ರೇಟ್ ಕಾರ್ಡ್ ಆನ್ ಲೈನ್ ನಲ್ಲಿ ಇಣುಕು ಹಾಕುತ್ತಿದ್ದಂತೆ ಮುಜುಗರಕ್ಕೀಡಾದ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ತನಿಖೆ ಆರಂಭಿಸಿದ್ದಾರೆ.

ರೇಟ್ ಕಾರ್ಡ್ ಗೆ ಸಂಬಂಧಿಸಿದಂತೆ ನೀಮ್ಕಾ ಚೌಕಿಯ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಗೌತಮ್ ಬುದ್ಧ ನಗರ ಪೊಲೀಸ್ ಕಮಿಷನರ್ ಲಕ್ಷ್ಮಿಸಿಂಗ್ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button