Kannada NewsLatestPolitics

ಅದೃಷ್ಟ ಪರೀಕ್ಷೆಗೆ ಇಳಿದ ಪ್ರಿಯಾಂಕ ಗಾಂಧಿ ಆಸ್ತಿ ಎಷ್ಟು..?

ಪ್ರಗತಿವಾಹಿನಿ ಸುದ್ದಿ: ಚೊಚ್ಚಲ ಬಾರಿಗೆ ವಯನಾಡು ಬೈ ಎಲೆಕ್ಷನ್ ಅಖಾಡದಿಂದ ಪ್ರಿಯಾಂಕ ಗಾಂಧಿ ವಾದ್ರಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗ್ಲೆ ಪ್ರಿಯಾಂಕ ನಾಮಪತ್ರ ಸಲ್ಲಿಸಿದ್ದು, ಭರ್ಜರಿ ರೋಡ್ ಶೋ ಕೂಡಾ ಮಾಡಿದ್ದಾರೆ. ಹಾಗಾದ್ರೆ ನಾಮಪತ್ರ ಸಲ್ಲಿಸುವ ವೇಳೆ ಪ್ರಿಯಾಂಕಾ ಘೋಷಣೆ ಮಾಡಿದ ಆಸ್ತಿ ಎಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ ಸುಮಾರು 12 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಅವರ ಪತಿ ರಾಬರ್ಟ್ ವಾದ್ರಾ ಸುಮಾರು 66 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಬಾಡಿಗೆ, ಬ್ಯಾಂಕ್ ಬಡ್ಡಿ ದರ, ಇತರ ಹೂಡಿಕೆಯಿಂದ 2023-24ರ ಹಣಕಾಸು ವರ್ಷದಲ್ಲಿ 46.39 ಲಕ್ಷ ರೂ. ಆದಾಯ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಪ್ರಿಯಾಂಕಾ 4.24 ಕೋಟಿ ರೂ. ಚರಾಸ್ತಿ, 7.74 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪ್ರಿಯಾಂಕಾ ಅವರ ಅತ್ಯಮೂಲ್ಯ ಆಸ್ತಿ ಶಿಮ್ಲಾ ಬಳಿಯಿರುವ ಅವರ 12,000 ಚದರ ಅಡಿ ಫಾರ್ಮ್‌ ಹೌಸ್ ಆಗಿದೆ. ಅಫಿಡವಿಟ್ ಪ್ರಕಾರ ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 5.64 ಕೋಟಿ ರೂ. ಆಗಿದೆ. 8 ಲಕ್ಷ ರೂ. ಮೌಲ್ಯದ ಹೋಂಡಾ ಸಿಆರ್‌ವಿ ಕಾರನ್ನು ಹೊಂದಿದ್ದಾರೆ.

ಇಷ್ಟೇ ಅಲ್ಲದೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು ಪ್ರಸ್ತುತ ಅದರ ಮೌಲ್ಯ 2.24 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ. 1.16 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಮೆಹೊಲಿಯಲ್ಲಿ 2.10 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. 2012-13 ರಲ್ಲಿ 15.75 ಲಕ್ಷ ರೂ. ತೆರಿಗೆ ಬಾಕಿ ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.ತನ್ನ ಮೇಲೆ ಎರಡು ಎಫ್‌ಐಆ‌ರ್ ದಾಖಲಾಗಿದೆ ಮತ್ತು ಅರಣ್ಯ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಪ್ರಿಯಾಂಕಾಗಿಂತ ಪತಿ ವಾದ್ರಾ ಹೆಚ್ಚು ಶ್ರೀಮಂತರಾಗಿದ್ದಾರೆ. ವಾದ್ರಾ ಬಳಿ 53 ಲಕ್ಷ ರೂ. ಮೌಲ್ಯದ ಲ್ಯಾಂಡ್ ಕ್ರೂಸರ್, 1.5 ಲಕ್ಷ ರೂ.ಮೌಲ್ಯದ ಮಿನಿ ಕೂಪರ್ ಮತ್ತು 4.22 ಲಕ್ಷ ರೂಪಾಯಿ ಮೌಲ್ಯದ ಸುಜುಕಿ ಮೋಟಾರ್ ಸೈಕಲ್ ಇದೆ. ವಾದ್ರಾ ಅವರು ವಿವಿಧ ಕಂಪನಿಗಳಲ್ಲಿ ಪಾಲುದಾರರಾಗಿ ಸುಮಾರು 35.5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button