Latest

ಭಾರತದ ಗೂಡಾಚಾರಿ ತನಿಖಾ ಸಂಸ್ಥೆಗಳು ಯಾವವು ? ಹುದ್ದೆಗಳಿಗೆ ನೇಮಕಾತಿ ಹೇಗೆ ? ಯಾರು ಅರ್ಹರು ? ಇಲ್ಲಿದೆ ಪೂರ್ಣ ವಿವರ (ಭಾಗ 4)

.

ಇಂಟೆಲಿಜೆನ್ಸ್ ಬ್ಯೂರೊ (ಐಬಿ)

 

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ – ಜೇಮ್ಸ್ ಬಾಂಡ್ ಸರಣಿ ಸಿನೇಮಾಗಳಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಏಕ್ ಥಾ ಟೈಗರ್, ಬೇಬಿ ಮೊದಲಾದ ಚಲನಚಿತ್ರಗಳು ಪತ್ತೆದಾರಿ ತನಿಖಾ ಸಂಸ್ಥೆಗಳು, ಪತ್ತೆದಾರರ ಜೀವ ಶೈಲಿ, ಕಾರ್ಯಾಚರಣೆಯನ್ನು ಸಾಧ್ಯಂತವಾಗಿ ತೆರೆದಿಟ್ಟಿದೆ. ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಒಮ್ಮೆಯಾದರೂ ಪತ್ತೆದಾರನಾಗಬೇಕೆಂಬ ಕನಸು ಕಾಣದೆ ಇರಲಾರ.

ಭಾರತದಲ್ಲಿ ದೇಶದ ಆಂತರಿಕವಾಗಿ ಮತ್ತು ವಿದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಅನೇಕ ಪತ್ತೆದಾರಿ ತನಿಖಾ ಸಂಸ್ಥೆಗಳಿವೆ. ಬೇರೆ ಬೇರೆ ತನಿಖಾ ಸಂಸ್ಥೆಗಳ ಕಾರ್ಯವ್ಯಾಪ್ತಿ, ಕಾರ್ಯ ವಿಧಾನ ವಿಭಿನ್ನವಾಗಿರುತ್ತವೆ.

ಭಾರತದಲ್ಲಿ ಸಿಬಿಐ (ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್) ಐಬಿ (ಇಂಟಲಿಜೆನ್ಸ್ ಬ್ಯೂರೊ), ರಾ (ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್), ಎನ್‌ಐಎ (ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಪ್ರಮುಖವಾಗಿವೆ.

ಈ ಪೈಕಿ ರಾ ವಿದೇಶಗಳಲ್ಲಿ ಗೂಡಾಚಾರಿಕೆ ಕಾಯಾಚರಣೆ ನಡೆಸುತ್ತಿದ್ದರೆ, ಐಬಿ ದೇಶದ ಒಳಗೆ ಮತ್ತು ವಿದೇಶಗಳೆರಡರಲ್ಲೂ ಕಾರ್ಯಚರಣೆ ನಡೆಸುತ್ತದೆ. ಸಿಬಿಐ ದೇಶದ ಎಲ್ಲ ಆಂತರಿಕ ಅಪರಾಧಿಕ ಚಟುವಟಿಕೆಗಳ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿದ್ದರೆ ಎನ್‌ಐಎ ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ.

ಐಬಿ (ಇಂಟಲಿಜೆನ್ಸ್ ಬ್ಯುರೊ)

ಐಬಿಯು ರಾ ದಂತೆಯೇ ಗೂಡಾಚಾರಿಕೆ ನಡೆಸುವ ತನಿಖಾ ಸಂಸ್ಥೆಯಾಗಿದ್ದು ಐಬಿಯ ಕಾರ್ಯವ್ಯಾಪ್ತಿ ಭಾರತ ದೇಶದ ಒಳಗಷ್ಟೇ ಸೀಮಿತವಾಗಿದೆ. ರಾ ವಿದೇಶಗಳಲ್ಲಿ ಗೂಡಾಚಾರಿಕೆ ನಡೆಸಿದರೆ ಐಬಿ ದೇಶದ ಆಂತರಿಕವಾಗಿ ಗೂಡಾಚಾರಿಕೆ ನಡೆಸುತ್ತದೆ. ಅಲ್ಲದೇ ದೇಶದೊಳಗೆ ಗೂಡಾಚಾರಿಕೆ ನಡೆಸುವ ಅನುಮಾನ ಇರುವವರ ಮೇಲೆ ಕಣ್ಣಿಡುವುದು ಐಬಿಯ ಮಹತ್ವದ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.

ವಾರ್ಷಿಕ ಬಜೆಟ್: ೩೧೬೮.೩೬ ಕೋಟಿ ರೂ.

ಸಂಸ್ಥಾಪಕರು: ಐಬಿಯು ೧೮೮೭ರಲ್ಲೇ ಭಾರತದಲ್ಲಿ ಸ್ಥಾಪನೆಯಾದ ವಿಶ್ವದಲ್ಲೇ ಅತ್ಯಂತ ಹಳೆಯ ತನಿಖಾ ಸಂಸ್ಥೆಗಳಲ್ಲಿ ಒಂದಾಗಿದೆ.

ಕಾರ್ಯಾಚರಣೆ ವ್ಯಾಪ್ತಿ: ಭಾರತ ದೇಶದ ವ್ಯಪ್ತಿ

ಒಟ್ಟು ಸಿಬ್ಬಂದಿ: ೧೭೮೮೪

ಹಾಲಿ ಮುಖ್ಯಸ್ಥ: ಅರವಿಂದ್ ಕುಮಾರ್ (ಐಬಿ ಪ್ರಧಾನ ನಿರ್ದೇಶಕ)

ಮಾತೃ ಇಲಾಖೆ: ಕೇಂದ್ರ ಗೃಹ ಇಲಾಖೆ

ವೇತನ: ಮಾಸಿಕ ಮೂಲ ವೇತನ ೧,೩೫೦೦೦, ಗ್ರೇಡ್ ಪೇ ೪೬೦೦, ಸಿಪಿಸಿ ೩೫೩೭೦, ಎಚ್‌ಆರ್‌ಎ ೪೦೫೦

ನೇಮಕಾತಿ ಹೇಗೆ : ಐಬಿಗೆ ನೇಮಕಾತಿ ಹೊಂದಲು ಸ್ಟಾಫ್ ಸೆಲೆಕ್ಷನ್ ಕಮೀಷನ್‌ನಿಂದ ನಡೆಯುವ ಕಂಬೈನ್ಡ್ ಗ್ರಾಜ್ಯುಯೇಟ್ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು. ಇದು ಎರಡು ಹಂತಗಳಲ್ಲಿ ನಡೆಯುವ ಪರೀಕ್ಷೆಯಾಗಿರುತ್ತದೆ. ಬಳಿಕ ವಿವಿಧ ಹಂತದ ಸಂದರ್ಶನಗಳಲ್ಲಿ ಉತ್ತೀರ್ಣರಾಗಬೇಕು.

(ಮುಕ್ತಾಯ)

ಭಾರತದ ಗೂಡಾಚಾರಿ ತನಿಖಾ ಸಂಸ್ಥೆಗಳು ಯಾವವು ? ಹುದ್ದೆಗಳಿಗೆ ನೇಮಕಾತಿ ಹೇಗೆ ? ಯಾರು ಅರ್ಹರು ? ಇಲ್ಲಿದೆ ಪೂರ್ಣ ವಿವರ; ಭಾಗ -3

 

ಭಾರತದ ಗೂಡಾಚಾರಿ ತನಿಖಾ ಸಂಸ್ಥೆಗಳು ಯಾವವು ? ಹುದ್ದೆಗಳಿಗೆ ನೇಮಕಾತಿ ಹೇಗೆ ? ಯಾರು ಅರ್ಹರು ? ಇಲ್ಲಿದೆ ಪೂರ್ಣ; ವಿವರ ಭಾಗ -2

 

ಭಾರತದ ಗೂಡಾಚಾರಿ ತನಿಖಾ ಸಂಸ್ಥೆಗಳು ಯಾವುವು ? ಹುದ್ದೆಗಳಿಗೆ ನೇಮಕಾತಿ ಹೇಗೆ ? ಯಾರು ಅರ್ಹರು ? ಇಲ್ಲಿದೆ ಪೂರ್ಣ ವಿವರ  Part -1

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button