Latest

*ದೇಶದ ಭವಿಷ್ಯದ ಬಗ್ಗೆ ಮೂಡಿರುವ ವಿಶ್ವಾಸ ಇಂದು ವ್ಯಕ್ತವಾಗಲಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇಂದಿನಿಂದ 26ನೇ ರಾಷ್ಟ್ರೀಯ ಯುವಜನೋತ್ಸವ ಆರಂಭವಾಗಲಿದ್ದು, 50 ಸಾವಿರ ಕಾಲೇಜು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತಾನಡಿದ ಸಚಿವರು, ನಾವು 25 ಸಾವಿರ ವಿದ್ಯಾರ್ಥಿಗಳ ನೋಂದಣಿ ಟಾರ್ಗೆಟ್ ಇಟ್ಟಿದ್ದೆವು. ಈಗಾಗಲೇ ವಿದ್ಯಾರ್ಥಿಗಳ ಸಂಖ್ಯೆ 50 ಸಾವಿರ ದಾತಿದೆ. ಪ್ರಧಾನಿ ಮೋದಿ ಹೋಗುವ ರಸ್ತೆಗಳಲ್ಲೂ ಲಕ್ಷಾಂತರ ಜನ ಬರುತ್ತಿದ್ದಾರೆ. ದೇಶದ ಭವಿಷ್ಯದ ಬಗ್ಗೆ ಮೂಡಿರುವ ವಿಶ್ವಾಸ ಇಂದು ವ್ಯಕ್ತವಾಗಲಿದೆ ಎಂದರು.

Related Articles

ಮಾರ್ಗ ಮಧ್ಯೆಯೇ ಪ್ರಧಾನಿ ಮೋದಿ ಜನರಿಗೆ ಶುಭಕೋರುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೆಲೆ ಕರ್ನಟಕ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಬಹಳಷ್ಟು ಅನುಕೂಲಗಳಾಗಿವೆ. ಫೆಬ್ರವರಿ, ಮಾರ್ಚ್ ನಲ್ಲಿ ಪ್ರಧಾನಿ ಮೋದಿಯವರು ಮತ್ತೆ ಧಾರವಾಡಕ್ಕೆ ಆಗಮಿಸಲಿದ್ದಾರೆ. ಐಐಟಿ ಉದ್ಘಾಟನೆಗಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

*ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ಕಾರು ಪತ್ತೆ*

Home add -Advt

https://pragati.taskdun.com/hubli-dharawadanational-youth-festivalpm-modicar-found/

*ಮತ್ತೋರ್ವ ವೈದ್ಯ ವಿದ್ಯಾರ್ಥಿ ಅರೆಸ್ಟ್*

Related Articles

Back to top button