Kannada NewsKarnataka NewsLatestPoliticsUncategorized

*ಡ್ರಗ್ಸ್ ಹಾವಳಿ ತಡೆಗೆ ವಿಶೇಷ ತಂಡ ರಚಿಸಲು ಮುಖ್ಯಮಂತ್ರಿ ಸೂಚನೆ*

ಡ್ರಗ್ ಮಾಫಿಯಾದ ಬೇರುಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ‌ ಸೂಚನೆ

ಪ್ರಗತಿವಾಹಿನಿ ಸುದ್ದಿ; ಹಾಸನ: ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯುವ ಸಮೂಹ ಮಾದಕದ್ರವ್ಯದ ದಾಸರಾಗದಂತೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಜತೆಗೆ ಡ್ರಗ್ ಮಾಫಿಯಾದ ಮೂಲವನ್ನು ಪತ್ತೆ ಹಚ್ಚಬೇಕು. ಚಾಳಿ ಬಿದ್ದ ಪೆಡ್ಲರ್ ಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಕಠಿಣ ಕ್ರಮಗಳ ಮೂಲಕ ಡ್ರಗ್ ಹಾವಳಿಯನ್ನು ತಡೆಯಬೇಕು ಎಂದು ಸೂಚಿಸಿದ್ದಾರೆ.

Home add -Advt

ವಿಶೇಷ ತಂಡ ರಚಿಸಿ

ಡ್ರಗ್ ಮಾಫಿಯಾದ ಮೇಲೆ ನಿರಂತರ ನಿಗಾ ಇಡುವುದು, ಮಾರಾಟ ಜಾಲದ ಚಲನ ವಲನಗಳ ಮೇಲೆ ತೀವ್ರ ನಿಗಾ ಇಡಬೇಕು. ಇದಕ್ಕಾಗಿ ಪ್ರತ್ಯೇಕವಾದ ವಿಶೇಷ ತಂಡ ರಚಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕು

ಪೊಲೀಸರು ಡ್ರಗ್ ಮಾಫಿಯಾದವರ ಮೇಲೆ ಕೇವಲ ಕೇಸು ದಾಖಲಿಸಿದರಷ್ಟೆ ಸಾಲದು. ನ್ಯಾಯಾಲಯಗಳಲ್ಲಿ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದೂ ಕೂಡ ಪೊಲೀಸರ ಹೊಣೆಗಾರಿಕೆ.

ಕೇಸು ದಾಖಲಾದ ಪ್ರಮಾಣ ಮತ್ತು ಶಿಕ್ಷೆಯ ಪ್ರಮಾಣ ಎರಡನ್ನೂ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು. ಪ್ರತಿ ಠಾಣೆಗಳಿಗೆ ಭೇಟಿ ನೀಡಿದ ವೇಳೆಯಲ್ಲಿ ಶಿಕ್ಷೆಯ ಪ್ರಮಾಣವನ್ನೂ ಪರಿಶೀಲಿಸಿ ಠಾಣಾಧಿಕಾರಿಗಳಿಂದ ವರದಿ ಕೇಳಬೇಕು ಎನ್ನುವ ಸೂಚನೆ ನೀಡಿದ್ದಾರೆ.

Related Articles

Back to top button