Kannada NewsKarnataka NewsLatest

ಚಿದಾನಂದ ಸವದಿ ಕಾರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು

ಕಾರಿನಲ್ಲಿ ನಾನಿರಲಿಲ್ಲ ಎಂದ ಚಿದಾನಂದ ಸವದಿ

ಪ್ರಗತಿವಾಹಿನಿ ಸುದ್ದಿ,  ಹುನಗುಂದ – ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಅವರ ಕಾರು ಹಾಗೂ ಬೈಕ್ ಮಧ್ಯೆ ಬಾಗಲಕೋಟೆಯ ಹುನಗುಂದ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಅಂಜನಾದ್ರಿ ಬೆಟ್ಟಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಚಿದಾನಂದ ಸವದಿ ವಾಪಸ್ಸಾಗುತ್ತಿದ್ದರು. ವಾಪಸ್ ಬರುವಾಗ ಬೈಕ್ ಗೆ ಅವರ ಕಾರು ಗುದ್ದಿದೆ. ನಂತರ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವ್ಯಕ್ತಿ ಬದುಕುಳಿಯಲಿಲ್ಲ.

Home add -Advt

ಚಿಕ್ಕಹಂಡಗಲ್ ನಿವಾಸಿ ಕೂಡಲಪ್ಪ (50) ಸಾವಿಗೀಡಾದ ವ್ಯಕ್ತಿ.

ಕಾರಿನಲ್ಲಿ ನಾನಿರಲಿಲ್ಲ. ನಾನು ಮುಂದೆ ಸ್ನೇಹಿತನ ಕಾರಿನಲ್ಲಿದ್ದೆ. ಹಿಂದೆ ನನ್ನ ಡ್ರೈವರ್ ಕಾರು ಚಲಾಯಿಸುತ್ತಿದ್ದ. ಅಪಘಾತದ ಸುದ್ದಿ ತಿಳಿದು ನಾನು ವಾಪಸ್ ಹೋಗಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದೆ. ಡಾಕ್ಟರ್ ಜೊತೆ ಕೂಡ ಮಾತನಾಡಿದೆ. ಆದರೆ ವ್ಯಕ್ತಿ ಬದುಕುಳಿಯಲಿಲ್ಲ ಎಂದು ಚಿದಾನಂದ ಸವದಿ ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬೆಳಗಾವಿ ಮತ್ತು ರಾಜ್ಯದ ಸೋಮವಾರದ ಕೊರೋನಾ ಸಮಗ್ರ ಮಾಹಿತಿ

Related Articles

Back to top button