
ಪ್ರಗತಿವಾಹಿನಿ ಸುದ್ದಿ; ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಚಾಕೋಲೆಟ್ ಆಸೆ ತೋರಿಸಿ ೫ ವರ್ಷದ ಬಾಲಕಿಯನ್ನು ಅಪಹರಿಸಿರುವ ಕಾಮುಕ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಗಹ್ಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮಗುವಿನ ತಾಯಿ ಮನೆಯ ಒಳಗೆ ಕೆಲಸ ಮಾಡುತ್ತಿದ್ದರು. ಮಗು ಮನೆಯ ಹೊರಗೆ ಆಟವಾಡುತ್ತಿದ್ದಳು. ಈ ವೇಳೆ ಮನೆಯಬಳಿ ಬಂದಿರುವ ಆರೋಪಿ ಗೇಟ್ ತೆರೆದು ಒಳ ನುಗ್ಗಿ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಹೊತ್ತೊಯ್ದಿದ್ದಾನೆ. ಬಳಿಕ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ಮನೆಯ ಬಳಿ ಬರುತ್ತಿರುವಹಾಗೂ ಬಲಕಿಯನ್ನು ಹೊಯ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಹಾರ ಮೂಲದ ಯುವಕನಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಹುಬ್ಬಳ್ಳಿ ಅಶೋಕನಗರ ಠಾಣೆಗೆ ನುಗ್ಗಿರುವ ಬಾಲಕಿ ಪೋಷಕರು ಹಾಗೂ ಸಾರ್ವಜನಿಕರು, ಆರೋಪಿಯನ್ನು ಬಂಧಿಸಿ ತಮಗೊಪ್ಪಿಸುವಂತೆ ಪಟ್ಟು ಹಿಡಿದಿದ್ದಾರೆ, ಪೊಲೀಸ್ ಠಾಣೆ ಎದಿರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.