Kannada NewsKarnataka NewsLatest

*ಮಗು ಸೇರಿ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆಸಿದ ಕಿರಾತಕ*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಆಸಿಡ್ ದಾಳಿಯಲ್ಲಿ ಅಂತ್ಯವಾಗಿದೆ. ಪತಿ ಮಹಾಶಯ ಕೋಪದ ಬರದಲ್ಲಿ 6 ತಿಂಗಳ ಮಗು ಸೇರಿ ಮನೆಯ ಐವರ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.

ಹುಬ್ಬಳ್ಳಿಯ ತಾರಿಹಾಳ ವಾಜಪೇಯಿ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 6 ತಿಂಗಳ ಮಗು ಮುಖ, ಬಾಯಿಗೆ ಸುಟ್ಟಗಾಯಗಳಾಗಿವೆ. ಪತ್ನಿ ರಾಜೇಶ್ವರಿ ಸ್ಥಿತಿ ಚಿಂತಾಜನಕವಾಗಿದೆ. ಸುರೇಶ್ ಬೈಲ್ ಸುರೇಶ್ ಬೈಲ್ ಪತ್ತಾರ (33)ಎಂಬಾತ ಆಸಿಡ್ ದಾಳಿ ನಡೆದಿದೆ.

ಮಗು, ಪತ್ನಿ ರಾಜೇಶ್ವರಿ (24), ಶೃತಿ ಹಾಗೂ ರೇಷ್ಮಾ ಎಂಬುವವರಿಗೆ ಗಾಯಗಳಾಗಿವೆ. ಆಸಿಡ್ ಎರಚುವಾಗ ಸುರೇಶ್ ಗೂ ಆಸಿಡ್ ತಗುಲಿ ಗಾಯಗಳಾಗಿವೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತಿ ಸುರೇಶ್ ನಾದಿನಿಯರ ಫೋಟೋ ತೆಗೆದು ಕಿರಿಕ್ ಮಾಡುತ್ತಿದ್ದ ಇದರಿಂದ ಬೇಸತ್ತಿದ್ದ ಪತ್ನಿ ರಾಜೇಶ್ವರಿ, ನಾದಿನಿಯರ ಫೋಟೋ ತೆಗೆಯದಂತೆ ತಾಕೀತು ಮಾಡಿದ್ದಳು. ಆದರೂ ಕೇಳದೇ ಸುರೇಶ್ ನಾದಿನಿಯರ ಫೋಟೋ ತೆಗೆದು ಕಿರಿಕ್ ಮಾಡಿದ್ದನಂತೆ ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಗಲಾಟೆ ವಿಕೋಪಕ್ಕೆ ಹೋಗಿ ಸುರೇಶ್ ತಾಮ್ರ, ಹಿತ್ತಾಳೆ ತೊಳೆಯುವ ಕೆಮಿಕಲ್ ನಿಂದ ದಾಳಿ ನಡೆಸಿದ್ದಾನೆ.

ಹುಬ್ಬಳ್ಳಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button