Kannada NewsKarnataka NewsLatest

*ಅಟ್ರಾಸಿಟಿ ಕೇಸ್: ಪೊಲೀಸರ ವಿಚಾರಣೆಗೆ ಹೆದರಿ ರೈತ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಜಮೀನು ವಿವಾದಕ್ಕೆ ಸಂಅಬ್ಂಧಿಸಿದಂತೆ ಪೊಲೀಸರ ವಿಚಾರಣೆಗೆ ಹೆದರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿಇದೆ.

ಇಲ್ಲಿನ ಉಮಚಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಂಗಪ್ಪ ಅಂಗಡಿ(48) ಮೃತ ರೈತ. ಹೊಲದ ದಾರಿ ವಿಚಾರವಾಗಿ ಉಮಚಗಿ ಗ್ರಾಮದಲ್ಲಿ ಗಲಾಟೆಯಾಗಿದ್ದು, ಈ ಸಂಬಂಧ ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲೇ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಕರೆ ಮಾಡಿ ಸ್ಪೆಷನ್​​​ಗೆ ಬರುವಂತೆ ಹೇಳಿದ್ದಾರೆ. ಇದರಿಂದ ಹೆದರಿದ ರೈತ ಜಮೀನಿನಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಮೀನು ಹಾದಿ ಸಂಬಂಧ ಉಮಚಗಿ ಗ್ರಾಮದಲ್ಲಿ ಜಗಳವಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು, ನಿಂಗಪ್ಪನನ್ನು ಕರೆಸಿ ಹಲ್ಲೆ‌ ಮಾಡಿದ್ದಾರೆ. ಅಲ್ಲದೇ ಪಂಚಾಯಿತಿ ಸದಸ್ಯರು, ನಿಂಗಪ್ಪ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಸಹ ಎರಡ್ಮೂರು ದಿನಗಳಿಂದ ನಿಂಗಪ್ಪನಿಗೆ ಕರೆ ಮಾಡಿ ಠಾಣೆಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ. ಇಂದು ಸಹ ಪೊಲಿಸರು, ನಿಮ್ಮ ಮೇಲೆ‌ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಸ್ಟೆಷನ್​​ಗೆ ಬನ್ನಿ ಎಂದು ನಿಂಗಪ್ಪನಿಗೆ ಕರೆ ಮಾಡಿ ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಪಂಚಾಯಿತಿ ಸದಸ್ಯರ ಹಲ್ಲೆಯಿಂದ ಮನನೊಂದಿದ್ದ ನಿಂಗಪ್ಪನಿಗೆ ಪೊಲೀಸರು ಸಹ ಮೇಲಿಂದ ಮೇಲೆ ಕರೆ ಮಾಡಿ ಠಾಣೆಗೆ ಬರುವಂತೆ ಒತ್ತಾಯಿಸಿದ್ದರಿಂದ ಭಯಗೊಂಡು ಸಾವಿಗೆ ಶರಣಾಗಿದ್ದಾರೆ.

Home add -Advt

Related Articles

Back to top button