Belagavi NewsBelgaum NewsKannada NewsKarnataka NewsPolitics

*ಬಸವ ಜಯಂತಿ ಉತ್ಸವ ಪ್ರಯುಕ್ತ “ಸಮಾನತೆಗಾಗಿ” ಬೃಹತ್ ಬೈಕ್ ರ್ಯಾಲಿ: ಬಸವರಾಜ ರೊಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವ ಜಯಂತಿ ನಿಮಿತ್ತ ಇದೆ ರವಿವಾರ ದಿನಾಂಕ 19 ರಂದು  ಬೃಹತ್ ಬೈಕ್ ರ್ಯಾಲಿಯನ್ನು ಬೆಳಗಾವಿ ಮಹಾನಗರದಲ್ಲಿ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ-2026 ಸಮಿತಿಯ ಸಂಚಾಲಕ ಬಸವರಾಜ ರೊಟ್ಟಿ ಹೇಳಿದರು.

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತಬಾಡಿದ ಅವರು,  ಬೆಳಗಿನ 8:00 ಗಂಟೆಗೆ  ಶಹಾಪೂರ ಗೋವಾವೇಸ  ಬಸವೇಶ್ವರ ಸರ್ಕಲ್ ದಿಂದ ಆರಂಭವಾಗುವ ಈ ರ್ಯಾಲಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೈಕ್ ಗಳು ಮತ್ತು ಕಾರುಗಳು ಭಾಗಿಯಾಗಲಿವೆ. ಬಸವಣ್ಣನವರು ಸಾರಿದ ಸಮಾನತೆಗಾಗಿ ಈ ರ್ಯಾಲಿಯನ್ನು ಆಯೋಜಿಸಲಾಗಿದ್ದು ಸಮಾಜದ ಸಮಸ್ತ ಜನ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದವರು ವಿನಂತಿಸಿದರು.

Home add -Advt

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಸ್ವಾಮೀಜಿಯವರು, ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ , ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಡಾ.

 ಪ್ರಭಾಕರ್ ಕೋರೆ ಅವರುಗಳು ಚಾಲನೆ ನೀಡಲಿದ್ದಾರೆ. 

ಬೆಳಗಾವಿಯ ಮಹಾಪೌರ ಪ್ರೀತಿ ಕಾಮಕರ್, ಉಪಮಹಾಪೌರ ಹನುಮಂತ ಕೊಂಗಾಲಿ, ಶಾಸಕರಾದ ಅಭಯ್ ಪಾಟೀಲ್, ರಾಜು ಸೇಠ ಮತ್ತು ನಗರ ಸೇವಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದವರು ವಿವರಿಸಿದರು. 

ರ್ಯಾಲಿಯೂ ಬಸವೇಶ್ವರ ಸರ್ಕಲದಿಂದ ಆರಂಭವಾಗಿ ತಿಳಕವಾಡಿ, ಅನುಗೋಳ, ವಡಗಾವ್ ,ಖಾಸಬಾಗ್, ಶಹಪುರ್ , ಕಪಿಲೇಶ್ವರ ರೋಡ್, ಕರ್ನಾಟಕ ಚೌಕ್, ರವಿವಾರಪೇಟೆ, ಖಡೆ ಬಾಜಾರ್, ಮಾರುತಿ ಗಲ್ಲಿ , ರಾಮದೇವ್ ಗಲ್ಲಿ, ಕಾಲೇಜು ರಸ್ತೆ , ಚೆನ್ನಮ್ಮ ಸರ್ಕಲ್, ಸಿವಿಲ್ ಆಸ್ಪತ್ರೆ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ರಸ್ತೆ , ಲಿಂಗಾಯಿತ ಭವನ, ಶ್ರೀನಗರ ಗಾರ್ಡನ್, ರಾಣಿ ಚೆನ್ನಮ್ಮ ಸೊಸೈಟಿ, ಸಾಯಿ ಮಂದಿರ, ಬಾಲ ಭವನ, ಲೌಡೇಲ ಸ್ಕೂಲ್, ಮಹಾಂತೇಶ್ ನಗರ ಬಸ್ ನಿಲ್ದಾಣ, ಪಿ & ಟಿ  ಕ್ವಾಟರ್ಸ್, ಸಿದ್ನಾಳ ಕ್ರಾಸ್ , ಕೆಎಂಎಫ್ ಡೈರಿ, ದತ್ತ ಮಂದಿರ, ಲಿಂಗಾಯಿತ ಸಂಘಟನೆ ಮೈದಾನದವರೆಗೆ ಬಂದು ಫ.ಗು. ಹಳಕಟ್ಟಿ ಭವನದಲ್ಲಿ ಕೊನೆಗೊಳ್ಳಲಿದೆ ಈ ಬೃಹತ್ ರ್ಯಾಲಿಯಲ್ಲಿ ಸಮಸ್ತ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.

Related Articles

Back to top button