ಪ್ರಗತಿ ವಾಹಿನಿ ಸುದ್ದಿ, ಕಿಶನ್ ಗಂಜ್ : ಬಿಹಾರದ ಕಿಶನ್ ಗಂಜ್ ನಲ್ಲಿ 7 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಭಾರಿ ಪ್ರಮಾದ ನಡೆದಿದೆ. ಪ್ರಶ್ನೆ ಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರ ಎಂದು ಬಿಂಬಿಸಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ಇಂಗ್ಲೀಷ್ ನಲ್ಲಿರುವ ಪ್ರಶ್ನೆ ಪತ್ರಿಕೆಯ ಮುಖ್ಯ ಪ್ರಶ್ನೆಯೊಂದರಲ್ಲಿ ” ಈ ಕೆಳಗಿನ ದೇಶಗಳ ಜನರನ್ನು ಹೇಗೆ ಕರೆಯಲಾಗುತ್ತದೆ ತಿಳಿಸಿರಿ ” ಎಂದು ಬರೆಯಲಾಗಿದೆ. ಬಳಿಕ ಆಯ್ಕೆಗಳಲ್ಲಿ ಭಾರತ ನೇಪಾಳ, ಚೀನಾ ಹೀಗೆ ದೇಶಗಳ ಸಾಲಿನಲ್ಲಿ ಕಾಶ್ಮೀರವನ್ನೂ ಸೇರಿಸಲಾಗಿದೆ.
ಈ ಬಗ್ಗೆ ಬಿಹಾರದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಣ್ತಪ್ಪಿನಿಂದ ಆಗಿದ್ದೇ ಹೊರತು ಉದ್ದೇಶಪೂರ್ವಕವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ