Latest

ಗರ್ಭಿಣಿಯೆಂದು ಗೊತ್ತಾಗಿ ಕೆಲವೇ ಗಂಟೆಗಳಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ !

ಪ್ರಗತಿ ವಾಹಿನಿ ಸುದ್ದಿ, ನ್ಯೂಯಾರ್ಕ್:  ಅಮೆರಿಕದ ಮಹಿಳೆಯೊಬ್ಬರಿಗೆ ಗರ್ಭಿಣಿ ಎಂದು ತಿಳಿದ 48 ಗಂಟೆಗಳಲ್ಲೇ ಹೆರಿಗೆಯಾಗಿದ್ದು ಅಚ್ಚರಿ ಮೂಡಿಸಿದೆ.

ಅಮೇರಿಕಾದ ನೆಬ್ರಾಸ್ಕಾದ ಪೇಯ್ಟನ್ ಸ್ಟೋವರ್ ಎಂಬ 23 ವರ್ಷದ ಮಹಿಳೆ ಇಂತದ್ದೊಂದು ಅಚ್ಚರಿಗೆ ಕಾರಣರಾಗಿದ್ದಾರೆ.

Home add -Advt

ಸ್ಟೋವರ್ ಅವರು ತಾವು ಗರ್ಭಿಣಿ ಎಂಬುದು ತಿಳಿದೇ ಇರಲಿಲ್ಲ. ಆದರೆ ಕೆಲ ದಿನಗಳಿಂದ ಅವರ ಕಾಲುಗಳಲ್ಲಿ ಊತ ಕಾಣಿಸಿಕೊಂಡ ಕಾರಣ ಅವರು ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಸ್ಟೋವರ್ ಅವರನ್ನು ಪರೀಕ್ಷಿಸಿದ ವೈದ್ಯರು ಗರ್ಭದೊಳಗಿರುವ ಶಿಶುವಿನ ಕಾರಣದಿಂದ ಮೂತ್ರ ಪಿಂಡದ ಮೇಲೆ ಒತ್ತಡ ಬೀಳುತ್ತಿರುವುದು ಕಾಲು ಊದಿಕೊಳ್ಳಲು ಕಾರಣ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗಿದೆ. ಮಗುವಿಗೆ ಇನ್ನೂ 10 ವಾರಗಳ ಬೆಳವಣಿಗೆಯಿತ್ತು ಎಂದು ಅಮೇರಿಕಾದ ಕೆಇ ಟಿವಿ ವರದಿ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ  ಸಂಪೂರ್ಣ ಜಲಾವೃತ;  ಬೆಂಗಳೂರು-ಪುಣೆ ಮಾರ್ಗ ಸ್ಥಗಿತ

Related Articles

Back to top button