Belagavi NewsBelgaum NewsKannada NewsKarnataka NewsNational

*ಅಂಬೋಲಿ ಫಾಲ್ಸ್ ಬಳಿ ಉರುಳಿ ಬಿದ್ದ ಬೃಹತ್ ಬಂಡೆಗಳು* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂರು ರಾಜ್ಯಗಳ ಜನರ ಅಚ್ಚುಮೆಚ್ಚಿನ ಪ್ರವಾಸಿ ಸ್ಥಳ ಕರ್ನಾಟಕಕ್ಕೆ ಹೊಂದಿಕೊಂಡಿರುವ ಅಂಬೋಲಿ ಫಾಲ್ಸ್ ಬಳಿ ಬೃಹತ್ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ  ಸಾವಂತವಾಡಿ ತಾಲೂಕಿನಲ್ಲಿರುವ ಅಂಬೋಲಿ ಫಾಲ್ಸ್ ಬಳಿ ತಡರಾತ್ರಿ ಏಕಾಏಕಿ ಗುಡ್ಡ ಕುಸಿತವಾಗಿ ರಸ್ತೆ ಮೇಲೆ ಬೃಹತ್ ಬಂಡೆಗಳು ಉರಳಿ ಬಿದ್ದಿದೆ. ಈ ಘಟನೆಯಲ್ಲಿ ಭಾರಿ ಅನಾಹುತ ತಪ್ಪಿದೆ. 

Home add -Advt

ಬೃಹತ್ ಬಂಡಗಳು ರಸ್ತೆ ಮೇಲೆ ಉರುಳಿ ಬಿದ್ದಿದ್ದರಿಂದ ಮಧ್ಯರಾತ್ರಿ ಕೆಲಹೊತ್ತು ಬೆಳಗಾವಿ-ಸಿಂಧದುರ್ಗ ಸಂಚಾರ ತಾತ್ಕಾಲಿಕ ಸ್ಥಗಿತವಾಗಿತ್ತು.‌ ಮಧ್ಯರಾತ್ರಿಯಿಂದಲೇ ಚಂದಗಡ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಬಂಡೆಗಳ ತೆರವು ಮಾಡಿಸಲಾಗಿದೆ.‌

ಆದರೆ ಇನ್ನು ಒಂದು ಕಡೆ ಬಂಡೆಗಳ ತೇರವು ಬಾಕಿ ಇದ್ದು, ಒಂದು ಮಾರ್ಗದಲ್ಲಿ ಸಂಚಾರಕ್ಕೆ ಮಹಾರಾಷ್ಟ್ರ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. 

Related Articles

Back to top button