GIT add 2024-1
Beereshwara 33

*ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸಚಿವರಿಂದ ಮತ​ಯಾಚನೆ* ; *ಮರಾಠ‌ ಸಮುದಾಯದಿಂದ​ ಕಾಂಗ್ರೆಸ್ ಗೆ ಭಾರಿ ಬೆಂಬಲ* 

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ :* ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಡಗಾಂವ ಹಾಗೂ ​ಪೀರನವಾಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ​ ಪರ ಪ್ರಚಾರ ನಡೆಸಿದರು. 

ವಡಗಾಂವನ ಅನುಸೂಯ ಸಭಾಂಗಣದಲ್ಲಿ  ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು,  ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಉತ್ತಮ ಅಭ್ಯರ್ಥಿ ಆಗಿದ್ದು, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಹೇಳಿದರು. 

Emergency Service

ಬಳಿಕ​ ಪೀರನವಾಡಿಯಲ್ಲಿ ಮತಯಾಚಿಸಿದ ಸಚಿವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಡಜನರಿಗೆ ಸಾಕಷ್ಟು ಅನುಕೂಲ ಆಗಿದೆ. ​ಪೀರನವಾಡಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ, ಈ‌ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ನಿರೀಕ್ಷಿಸಲಾಗಿದೆ ಎಂದು‌  ಹೇಳಿದರು. 

​ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಗೆಲುವಿಗೆ ಎಲ್ಲರೂ ​ಒ​ಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.​ ​ಈ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬೆಂಬಲ ವ್ಯಕ್ತವಾಯಿತು. 

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ​ ಪರಶುರಾಮ ಡಗೆ,​ ಪ್ರದೀಪ್.ಎಂ.ಜೆ.ಅಮೂಲ ದೇಸಾಯಿ, ಮಹಾದೇವ ಗಡ್ಕರಿ,  ಸಾಕ್ಷಿ ಕಣಬರಕರ, ಮಾಧುರಿ ಮಿರ್ಜೆ, ಮಹೇಶ್ ಪಾಟೀಲ್, ಸಚಿನ್ ಗೊರ್ಲೆ, ಪೀರಾಜಿ ಸೂಳಗೆಕರ್, ಪ್ರಮೋದ್ ಪಾಟೀಲ್, ವಿಠಲ್ ಸಾಂಬ್ರೇಕರ್, ಮಲ್ಲಿಕಾರ್ಜುನ ಕೊಡಗೂರು,ಮಹಾಂತೇಶ್ ಕರಿಗಾರ್ , ರಾಜು ಕಡೋಲ್ಕರ್,  ಸೇರಿದಂತೆ ಹಲವ​ರು ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2