ಪ್ರಗತಿವಾಹಿನಿ ಸುದ್ದಿ, ಮೈಸೂರು – ಮೈಸೂರು ಚಾಮುಂಡೇಶ್ವರಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾಕ್ಟರ ಶಶಿ ಶೇಖರ ದೀಕ್ಷಿತ್ ಅವರು ಉತ್ತರ ಕರ್ನಾಟಕದ ಪ್ರಸಿದ್ಧ ಮಠವಾದ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಕ್ಯಾಲೆಂಡರನ್ನು ಲೋಕಾರ್ಪಣೆಗೊಳಿಸಿದರು.
ಹುಕ್ಕೇರಿಮಠಕ್ಕೂ ಮೈಸೂರು ಚಾಮುಂಡೇಶ್ವರಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀಗಳು ಕ್ಷೇತ್ರದ ಬಗ್ಗೆ ಅಪಾರ ವಾಗಿರುವ ಶ್ರದ್ಧೆಯನ್ನು ಇಟ್ಟುಕೊಂಡಿದ್ದಾರೆ. ಇವತ್ತು ಉತ್ತರ ಕರ್ನಾಟಕದಲ್ಲಿ ಎಲ್ಲಾ ಸಮುದಾಯಕ್ಕೂ ಕೂಡ ಮಾರ್ಗದರ್ಶನ ಮಾಡುವಂತಹ ಮಠವಾಗಿರುವ ಅಭಿಮಾನದ ಸಂಗತಿ ಎಂದರು.
ಖ್ಯಾತ ವಾಸ್ತುತಜ್ಞ ಶ್ರೀಧರ್ ಪರಿಮಳಾಚಾರ್ಯ ಅವರು ಮಾತನಾಡುತ್ತಾ ಹುಕ್ಕೇರಿ ಹಿರೇಮಠದ ಶ್ರೀಗಳ ಸಾಧನೆ ಎಲ್ಲರಿಗೂ ಕೂಡ ಮಾದರಿ ಇವತ್ತು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸಾನಿಧ್ಯದಲ್ಲಿ ದಿನದರ್ಶಿಕೆ ಬಿಡುಗಡೆಯಾಗುತ್ತಿರುವುದು ಅಭಿಮಾನದ ಸಂಗತಿ ಎಂದರು.
ದೇವಸ್ಥಾನದ ಮಣ್ಣೆ ಗಾರ ನಾಗರಾಜ ಅವರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ಅಮರನಾಥ್ ಅವರು ಮಾತನಾಡಿ ಧಾರ್ಮಿಕ ಮನೋಭಾವವನ್ನು ಎಲ್ಲರಿಗೂ ಬಿತ್ತುತ್ತಿರುವ ಹುಕ್ಕೇರಿ ಹಿರೇಮಠದ ಕಾರ್ಯ ಶ್ಲಾಘನೀಯ ಎಂದರು ಉದ್ಯಮಿ ಚಂದ್ರಶೇಖರ ಬಾಗೇವಾಡಿ ಅವರು ಬಾಲಾಜಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಚಾಮುಂಡೇಶ್ವರಿ ಅಮ್ಮನವರು ನಾಡದೇವತೆ ಯಾಗಿದ್ದಾರೆ. ಈ ವರ್ಷ ಎಲ್ಲರಿಗೂ ಕೂಡ ಶಾಂತಿ ನೆಮ್ಮದಿ ಸಿಗುವ ಹಾಗೆ ಆಶೀರ್ವಾದ ಮಾಡಲಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ