Kannada NewsKarnataka News

ಸಂಕಷ್ಟಕ್ಕೆ ಸಿಲುಕಿದ ಅರ್ಚಕರಿಗೆ ಹುಕ್ಕೇರಿ ಶ್ರೀಗಳ ನೆರವು

ಪ್ರಗತಿವಾಹಿನಿ ಸುದ್ದಿ, ರಾಯಬಾಗ – ಸಂಕಷ್ಟಕ್ಕೆ ಸಿಲುಕಿದ ಅರ್ಚಕರ ಸಹಾಯಕ್ಕೆ ಬಂದಿರುವ  ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮಿಜಿ, ರಾಜ್ಯದ ಎಲ್ಲ ಅರ್ಚಕರಿಗೂ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
 ಕೊರೊನಾ ನಿಮಿತ್ಯ ಲಾಕ್ ಡೌನ್ ನಿಂದಾಗಿ ಸುಮಾರು ಎರಡು ತಿಂಗಳಿಂದ ದೇವಸ್ಥಾನ,‌ ಮಠಗಳ ಬಾಗಿಲು ಬಂದ್ ಮಾಡಲಾಗಿದೆ. ದಿನನಿತ್ಯ ಕೇವಲ ದೇವರ ಪೂಜೆಮಾಡಿ  ಭಕ್ತರು ನೀಡುವ ಸಹಾಯದಿಂದ ಎಷ್ಟೋ ಅರ್ಚಕರ(ಪುರೊಹಿತರ) ಕುಟುಂಬಗಳು ಜೀವನ ಸಾಗಿಸುತಿದ್ದವು.
ಲಾಕ್ ಡೌನ್ ನಿಂದ‌ ಅಂತಹ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ  ರಾಜ್ಯದ ಎಲ್ಲಾ ಧರ್ಮದ ಅರ್ಚಕರ (ಪುರೋಹಿತರ) ಕುಟುಂಭಗಳಿಗೆ ನೇರವಿಗೆ ಬರಬೇಕೆಂದು  ಸ್ವಾಮಿಜಿಗಳು ಮನವಿ ಮಾಡಿದ್ದಾರೆ.
 ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ತಮ್ಮ ಹುಕ್ಕೇರಿ ಹಿರೇಮಠದ ರಾಯಬಾಗ ಶಾಖಾ ಆವರಣದಲ್ಲಿ ಪಟ್ಟಣದ ಎಲ್ಲ ಧರ್ಮದ ವಿವಿಧ ದೇವಸ್ಥಾನಗಳು, ಮಠ, ಬಸ್ತಿ ಹಾಗೂ ಮಸಿದಿಗಳ ಅರ್ಚಕರ,ಪೂಜಾರಿಗಳು, ಮೌಲಾಗಳಿಗೆ  ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರದ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಜನಪ್ರತಿನಿಧಿಗಳು ಕೂಡ ಅರ್ಚಕರಿಗೆ ನೆರವಿಗೆ ಬರಬೇಕು, ಅಲ್ಲದೇ ಈಗಾಗಲೇ ಹುಕ್ಕೇರಿಮಠದಿಂದ ಜಿಲ್ಲಾದ್ಯಂತ 2 ಸಾವಿರ ಮಾಸ್ಕ್, ಒಂದು ಸಾವಿರ ಆಹಾರ ಕೀಟ್ ಗಳನ್ನು ಕೂಲಿ ಕಾರ್ಮಿಕರಿಗೆ, ಬಡ ಕುಟುಂಬಗಳಿಗೆ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಯಬಾಗ ಶಾಸಕ ಡಿ.ಎಂ ಐಹೊಳೆ, ಅರುಣ ಐಹೊಳೆ, ರವಿ ರಂಗೋಲಿ, ಅಣ್ಣಾಸಾಬ ಖೇಮಲಾಪೂರ, ಸದಾಶಿವ ಹಳಿಂಗಳಿ, ಸದಾಶಿವ ಘೊರ್ಪಡೆ ಸೆರಿದಂತೆ ಮಠದ ಭಕ್ತರು ಹಾಗೂ ತಾಲೂಕಿನ ವಿವಿಧ ದೇವಸ್ಥಾನಗಳ ಅರ್ಚಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button