ವಾಹಿನಿ ಸುದ್ದಿ, ಹುಕ್ಕೇರಿ : ಜನತಾ ಕರ್ಪ್ಯೂದಿಂದ ಅನೇಕ ಜನ ಕೂಲಿಕಾರ್ಮಿಕರಿಗೆ, ಭಿಕ್ಷುಕರಿಗೆ, ಬಡವರಿಗೆ ತೊಂದರೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ ಭಾಗಕ್ಕೆ ಸುಮಾರು 150 ದಿನ ಬಳಕೆ ಸಾಮಗ್ರಿಗಳು ಸೇರಿದಂತೆ ಅಕ್ಕಿ, ಸಕ್ಕರೆ, ಚಹಪುಡಿ, ಗೋಧಿಹಿಟ್ಟು ಅಡುಗೆ ಎಣ್ಣೆ, ಬಟ್ಟೆಸೊಪು, ಮೈಸೋಪುಗಳನ್ನು ನೀಡುವುದರ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಗಳು ಮಾತನಾಡುತ್ತಾ ಅತಿವೃಷ್ಠಿ, ಅನಾವೃಷ್ಠಿ, ಆದಾಗ ನಾವೇ ಕೈಯ್ಯಾರೆ ಹೋಗಿ ಎಲ್ಲರಿಗೂ ಕೂಡ ಸಹಾಯವನ್ನು ಮಾಡಿದ್ದೆವು. ಆದರೆ ಇವತ್ತು ಕರೋನಾ ವೈರಸ್ಸು ಎಲ್ಲರನ್ನೂ ಬಂಧಿಸಿದೆ. ಜೊತೆಗೆ ಕಾನೂನನ್ನ ಪರಿಪಾಲಿಸುವುದು ನಮ್ಮ ಧರ್ಮ ವಾಗಿರುವುದರಿಂದ, ಹುಕ್ಕೇರಿಯ ಸಿಪಿಐ ಗುರುರಾಜ ಕಲ್ಯಾಣ್ ಶೆಟ್ಟಿ ಇವರ ಮುಖಾಂತರ ಮೂರು ವಿಭಾಗ ಹೋಬಳಿ ಭಾಗಕ್ಕೆ ಶ್ರೀಮಠದಿಂದ ಸಹಾಯವನ್ನು ಮಾಡಲಾಗಿದೆ. ಜನರು ಭಯಪಡುವ ಅವಶ್ಯಕತೆಯಿಲ್ಲ ಬೇಗ ನಾವೆಲ್ಲರೂ ಕೂಡ ಈ ಭಯದ ವಾತಾವರಣದಿಂದ ಹೊರಬರುತ್ತೇವೆ. ಎಲ್ಲರೂ ಆರೋಗ್ಯವಂತರಾಗಿ ಇರಲು ನಾವೆಲ್ಲರೂ ಕೂಡ ನಿತ್ಯ ಭಗವಂತನನ್ನು ಪ್ರಾರ್ಥಿಸೋಣ ಎಂದರು.
ಸಿಪಿಐ ಗುರುರಾಜು ಕಲ್ಯಾನಶೆಟ್ಟಿ ಅವರು ಮಾತನಾಡಿ ಪೊಲೀಸರು ಎಂದಾಕ್ಷಣ ಕೇವಲ ಲಾಠಿ ನೆನಪಿಗೆ ಬರುತ್ತದೆ. ಆದರೆ ಮಾನವೀಯತೆಗೂ ಕೂಡ ಪೊಲೀಸರು ಸ್ಪಂದಿಸುತ್ತಾರೆ. ಹುಕ್ಕೇರಿ ಶ್ರೀಗಳು ಲಾಠಿ ಹಿಡಿಯುವ ಕೈಯಲ್ಲಿ ಜನರಿಗೆ ದಾಸೋಹವನ್ನು ಮಾಡಲು ಹಚ್ಚಿದ್ದಾರೆ. ಇದು ನಿಜಕ್ಕೂ ಕೂಡ ಅಭಿಮಾನದ ಸಂಗತಿ ಎಂದರು.
ಹುಕ್ಕೇರಿಯ ಪಿಎಸ್ಐ ಶಿವಾನಂದ ಗುಡಗನಟ್ಟಿ ಮಾತನಾಡಿ ಇಡೀ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿ ಮಠಾಧೀಶರು ಕರೋನಾ ವೈರಸ್ ನಿಂದಾಗಿ ಮುಂದೆ ಬಂದು ಜನರಿಗೆ ಸಹಾಯ ಮಾಡುತ್ತಿರುವುದು ಅಭಿಮಾನದ ಸಂಗತಿ. ಇದನ್ನ ಅರ್ಥೈಸಿಕೊಳ್ಳುವ ಅವಶ್ಯಕತೆ ನಮಗಿದೆ. ನಾವೆಲ್ಲರೂ ಕೂಡ ಎಲ್ಲಾ ಕಡೆ ಅವಶ್ಯವಿರುವ ಜನರಿಗೆ ಹಂಚುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ