ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅಕ್ಷರ ದಾಸೋಹ ಯೋಜನೆ 18 ತಿಂಗಳ ನಂತರದಲ್ಲಿ ಸರ್ಕಾರದ ಆದೇಶದಂತೆ ನಡೆಯುತ್ತಿದ್ದು ಇಂದು ನಗರದ ಹೋರವಲಯದಲ್ಲಿ ಇರುವ ಶ್ರೀ ಗುರುಶಾಂತೆಶ್ವರ ಜನಕಲ್ಯಾಣ ಪ್ರತಿಷ್ಠಾಪನದ ಅಕ್ಷರ ದಾಸೋಹ ಕೆಂದ್ರದಲ್ಲಿ ಹುಕ್ಕೇರಿ ತಾಲೂಕಿನ ಅಕ್ಷರ ದಾಸೋಹ ಯೋಜನೆಗೆ ಚಾಲನೆಯನ್ನು ತಾಲೂಕಿನ ದಂಡಾಧಿಕಾರಿ ಡಾ ಡಿ ಹೆಚ್ ಹೂಗಾರ ಅವರು ನೆರವೆರಿಸಿದರು.
ಈ ವೇಳೆ ಮಾತನಾಡಿದ ಅವರು ಕೊರೊನಾ ಸಂಕಷ್ಟದಿಂದ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೆವೆ 18 ತಿಂಗಳ ನಂತರದಲ್ಲಿ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆ ಆರಂಭವಾಗುತ್ತಿರುವುದು ಸಂತಸದ ಸಂಗತಿ ತಾವೆಲ್ಲರೂ ಕೂಡ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ಮತ್ತು ಪಾಲಕರು ಮಕ್ಕಳಿಗೆ ಮಾಸ್ಕನ್ನ ಧರಿಸಿಕೊಳ್ಳುವಂತೆ ಸೂಚಿಸುವುದು ಶಾಲೆಯಲ್ಲಿ ಎಲ್ಲರೂ ಮಕ್ಕಳ ಆರೋಗ್ಯದ ಕಡೆ ಗಮನವಹರಿಸಿ ಅಕ್ಷರ ದಾಸೋಹ ಯೋಜನೆಯನ್ನಾ ವ್ಯವಸ್ಥಿತವಾಗಿ ನಡೆಸಬೇಕು ಎಂದು ಕರೆನೀಡಿದರು
.
ಹುಕ್ಕೇರಿ ತಾಲೂಕಿನ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಅವರು ಮಾತನಾಡಿ ಹುಕ್ಕೇರಿ ತಾಲೂಕಿನಲ್ಲಿ ಅಚ್ಚುಕಟ್ಟಾಗಿ ಹುಕ್ಕೇರಿಯ ಗುರುಶಾಂತೆಶ್ವರ ಜನಕಲ್ಯಾಣ ಪ್ರತಿಷ್ಠಾಪನ ಸರಕಾರದ ಆದೇಶದಂತೆ ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಇವತ್ತು ಮಕ್ಕಳು ಬಿಸಿಯೂಟದ ಲಾಭವನ್ನು ಪಡೆಯುತ್ತಿರುವುದು ಖುಷಿ ತಂದಿದೆ ಎಂದರು. ಹುಕ್ಕೇರಿ ತಾಲೂಕಿನ ಕ್ಷೆತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ ಅವರು ಮಾತನಾಡುತ್ತಾ ಈಗಾಗಲೇ ನಾವು ಪ್ರತಿಯೊಂದು ಶಾಲೆಗೆ ಆದೇಶಿಸಿದ್ದೆವೆ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶಿಕ್ಷಣವನ್ನು ಕಲೆಯಬೇಕು ಮತ್ತು ಬಿಸಿಯೂಟವನ್ನು ಕೂಡ ಅಚ್ಚುಕಟ್ಟಾಗಿ ಅಲ್ಲಿಯ ಸಿಬ್ಬಂದಿ ನಿಡಬೇಕು ಎಂದರು, ನಿಪ್ಪಾಣಿಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಅವರು ಮಾತನಾಡುತ್ತಾ ನಿಪ್ಪಾಣಿ ಹಾಗೂ ಚಿಕ್ಕೋಡಿ ವಿಭಾಗಕ್ಕೆ ಚಿಕ್ಕೋಡಿ ಸಮಿಪದ ನಾಯಿಂಗ್ಲಜನಲ್ಲಿ ಅಕ್ಷರ ದಾಸೋಹ ಯೋಜನೆ ಶ್ರೀ ಮಠದಿಂದಲೆ ನಡೆಯುತ್ತಿದೆ ಅಲ್ಲಿಯ ಸಿಬ್ಬಂದಿಯು ಕೂಡ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಹುಕ್ಕೇರಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ ಅವರು ಮತ್ತು ಚಿಕ್ಕೋಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಕೆಂಪಣ್ಣ ತಳವಾರ ಅವರು ಮಾತನಾಡುತ್ತಾ ಎರಡು ತಾಲೂಕಿನಲ್ಲಿ ಕೂಡ ಶ್ರೀ ಮಠದಿಂದ ಅಕ್ಷರ ದಾಸೋಹ ಯೋಜನೆ ಕಾರ್ಯ ರೂಪಕ್ಕೆ ಬರುತ್ತಿದ್ದು ನಾವೆಲ್ಲರೂ ಕೂಡ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಿದ್ದೆವೆ ಎಂದರು ಸಂಸ್ಥೆಯ ಅಧ್ಯಕ್ಷರು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ಮಕ್ಕಳ ಆರೋಗ್ಯದ ಅನ್ವಯ ಅಚ್ಚುಕಟ್ಟಾದ ಆಹಾರವನ್ನು ಕೆಂದ್ರ ತಯಾರಿಸುತ್ತಿದೆ ನಮ್ಮ ಸಿಬ್ಬಂದಿ ವರ್ಗಕ್ಕೂ ಕೂಡ ಕಟ್ಟುನಿಟ್ಟಾಗಿ ಮಾರ್ಗದರ್ಶನ ಮಾಡಿದ್ದೆವೆ ಅಕ್ಷರ ದಾಸೋಹ ಯೋಜನೆ ಎಲ್ಲರೂ ಕೂಡ ಸದುಪಯೋಗ ಮಾಡಿಕೊಳ್ಳಲಿ ಎಂದರು.
ಹುಕ್ಕೇರಿ ತಾಲೂಕಿನ 202 ಶಾಲೆಗಳಿಗೆ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲುಕಿಗೆ 103 ಶಾಲೆಗಳಿಗೆ 6 ನೆ ತರಗತಿಯಿಂದ 10 ನೆ ತರಗತಿ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆ ಕಾರ್ಯರೂಪಕ್ಕೆ ಬಂದು ಇವತ್ತು ಮಕ್ಕಳಿಗೆ ಸಿಹಿ ಮತ್ತು ಪಲಾವ ಸಾಂಬಾರ್ ನೀಡಲಾಯಿತು.
ಭಾರತೀಯ ವಾಯುಪಡೆಯ ತರಬೇತು ವಿಮಾನ ಪತನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ